Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಕ್ರಮ ಗಣಿಗಾರಿಕೆ ಎಂಬ ಮಾತೇ ಇಲ್ಲಿಲ್ಲ!...

ಸಕ್ರಮ ಗಣಿಗಾರಿಕೆ ಎಂಬ ಮಾತೇ ಇಲ್ಲಿಲ್ಲ! ಇಲ್ಲಿ ಎಲ್ಲವೂ ಅಕ್ರಮವೇ...!

ಹಾರಿಸ್ ಹೊಸ್ಮಾರ್ಹಾರಿಸ್ ಹೊಸ್ಮಾರ್6 April 2017 11:59 PM IST
share
ಸಕ್ರಮ ಗಣಿಗಾರಿಕೆ ಎಂಬ ಮಾತೇ ಇಲ್ಲಿಲ್ಲ! ಇಲ್ಲಿ ಎಲ್ಲವೂ ಅಕ್ರಮವೇ...!

ಮೂಡುಬಿದಿರೆ, ಎ.6: ಮೂಡುಬಿದಿರೆ ಹೋಬಳಿಯಲ್ಲಿ ಕೆಂಪುಕಲ್ಲಿಗೆ ಹೆಸರಾಗಿರುವ ಪುತ್ತಿಗೆಯಲ್ಲಿ ಸಕ್ರಮ ಗಣಿಗಾರಿಕೆ ಎಂಬ ಮಾತೇ ಇರುವುದಿಲ್ಲ! ಇಲ್ಲಿ ಎಲ್ಲವೂ ಅಕ್ರಮವೇ! ಎಕರೆಗಟ್ಟಲೆ ಪ್ರದೇಶಗಳಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರೂ ಇದುವರೆಗೆ ಯಾವುದೇ ಗಣಿ ಅಧಿಕಾರಿಯಾಗಲಿ, ಇನ್ನಿತರ ವಿಚಕ್ಷಣಾ ದಳಗಳಾಗಲಿ ಇಲ್ಲಿ ದಾಳಿ ಮಾಡಿದ ಇತಿಹಾಸ ಇಲ್ಲ! ಇದು ಮಿನಿ ಬಳ್ಳಾರಿಯಂತಿರುವ ಮಂಗಳೂರು ತಾಲೂಕಿನ ಗ್ರಾಮ. ಯಾಂತ್ರೀಕೃತ ಗಣಿಗಾರಿಕೆ ಇಲ್ಲಿ ಶುರುವಾಗಿ ದಶಕಗಳೇ ಕಳೆದಿವೆ.

ಅತ್ಯಧಿಕ ಸಂಖ್ಯೆಯಲ್ಲಿರುವ ಈ ಪ್ರದೇಶದ ಕೊರಗ ಹಾಗೂ ದಲಿತ ಸಮುದಾಯದ ಮಂದಿಗೆ ಸರಕಾರ ಬೇಕಾದಷ್ಟು ಅನುದಾನ, ಜಾಗಗಳನ್ನು ಕಾಲಕ್ರಮೇಣದಿಂದ ನೀಡುತ್ತಲೇ ಬಂದಿದೆಯಾದರೂ ಇಲ್ಲಿನ ಕೆಂಪುಕಲ್ಲು ವೀರರು ಅದನ್ನೆಲ್ಲಾ ತಮ್ಮ ವಸಾಹತು ಶಾಹಿಯ ಭಾಗವಾಗಿಸಿಕೊಂಡು ನುಂಗಿ ನೀರುಕುಡಿಯುತ್ತಿದ್ದಾರೆ. ಕೆಂಪುಕಲ್ಲಿನ ಕೋರೆಗಳಲ್ಲಿ ಮಳೆಗಾಲದಲ್ಲಿ ಭರ್ತಿ ನೀರು ನಿಲ್ಲುತ್ತದೆ. ಮಕ್ಕಳು ಅಲ್ಲೇ ಬದಿಯಲ್ಲಿ ಆಟವಾಡುತ್ತಾ ಸಾಗುತ್ತಾರೆ. ಕೆಂಪುಕಲ್ಲು ಗಣಿಗಾರಿಕೆ ನಡೆಸಿ ಉಂಟಾಗುವ ಸುಮಾರು 25 ರಿಂದ 50 ಅಡಿ ಆಳದ ಹೊಂಡದಲ್ಲಿ ನೀರು ನಿಂತು ಅಪಾಯಕಾರಿಯಾಗಿದ್ದರೂ ಅದನ್ನು ಕೊರೆದವರೂ ಅದರ ಸುತ್ತ ಯಾವುದೇ ತಡೆಬೇಲಿ ನಿರ್ಮಾಣ ಮಾಡುವುದಿಲ್ಲ!

ಐದು ವರ್ಷಗಳ ಹಿಂದೆ ಬೆಳುವಾಯಿಯಲ್ಲಿ ನಾಲ್ಕು ಕಂದಮ್ಮಗಳು ಇಂತಹುದೇ ಕೆಂಪುಕಲ್ಲಿನ ಕೋರೆಗೆ ಬಿದ್ದಾಗ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತವು ತಹಶೀಲ್ದಾರ್‌ರ ಮೂಲಕ ಕೆಂಪುಕಲ್ಲುಗಳ ಧಣಿಗಳಿಗೆ ಬೇಲಿ ನಿರ್ಮಿಸುವಂತೆ ಸೂಕ್ತ ಮಾರ್ಗದರ್ಶನ ನೀಡಿದ್ದು, ಬರೇ ಪತ್ರದಲ್ಲಿ ಮಾತ್ರ. ಅದನ್ನು ಕಾರ್ಯರೂಪಕ್ಕೆ ಜಾರಿಗೆ ತಂದ ಒಂದೇ ಒಂದು ಉದಾಹರಣೆ ಮೂಡುಬಿದಿರೆ ಹೋಬಳಿಯಲ್ಲಿ ಕಾಣಸಿಗುವುದಿಲ್ಲ. ಈ ಬಾರಿಯ ಮಳೆಗಾಲಕ್ಕೆ ಮುನ್ನ ಈ ನೂರಾರು ಎಕರೆ ಪ್ರದೇಶಗಳ ಕೆಂಪು ಕಲ್ಲು ಗಣಿಗಾರಿಕೆಯ ಮಿನಿ ಬಳ್ಳಾರಿಗೆ ಎಷ್ಟು ಮಂದಿ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತ್ತಾರೆನ್ನುವುದನ್ನು ನೋಡಲು ಸ್ಥಳೀಯ ಜನರು ಕಾದು ಕುಳಿತಿದ್ದಾರೆ.

ಈ ಹಿಂದೆ ಸರಕಾರವು ಸಮಗ್ರ ಗಿರಿಜನ ಯೋಜನೆಯಡಿ ಕೊರಗ ಫಲಾನುಭವಿಗಳಿಗೆ ಪುತ್ತಿಗೆ ಗ್ರಾಮದ ಕೊಡ್ಯಡ್ಕ ಬಂಕಿಮಜಲು ಪ್ರದೇಶದಲ್ಲಿ 20 ಎಕರೆ ಜಾಗ ನೀಡಿತ್ತು. ಅದನ್ನು ಖಾಸಗಿಯವರಿಂದ ಖರೀದಿಸಿ ಸರಕಾರ ಕೊರಗರಿಗೆಂದು ನೀಡಿತ್ತು. 20 ಕೊರಗ ಕುಟುಂಬಗಳಿಗೆ ತಲಾ ಒಂದು ಎಕರೆಯಂತೆ ಒಟ್ಟು 20 ಎಕರೆ ಜಾಗವನ್ನು ಪಡೆದಿದ್ದ ಫಲಾನುಭವಿಗಳಿಗೆ ಅದರಿಂದ ಪ್ರಯೋಜನವೇ ಆಗಿರಲಿಲ್ಲ. ಏಕೆಂದರೆ ಅದೊಂದು ಕೃಷಿ ಯೋಗ್ಯ ಭೂಮಿಯಾಗಿರಲಿಲ್ಲ. ಯೋಜನೆಯಂತೆ ಜಾಗದ ಕ್ರಯದ ಶೇ.25ರಷ್ಟು ಮೊತ್ತವನ್ನು ಕೊರಗ ಕುಟುಂಬಗಳು ಪಾವತಿಸಬೇಕಿತ್ತು. ಉಳಿದ ಶೇ.75ರಷ್ಟು ಸರಕಾರ ಭರಿಸುವ ಭರವಸೆ ನೀಡಿತ್ತು. ಆದರೆ 15 ವರ್ಷಗಳ ಹಿಂದೆ ಕೃಷಿ ಯೋಗ್ಯವಲ್ಲ

ವಾಗಿದ್ದ ಈ ಭೂಮಿಗೆ ಶೇ.25ರಷ್ಟು ಪಾವತಿಯನ್ನೂ ಮಾಡುವ ಸ್ಥಿತಿಯಲ್ಲಿ ಫಲಾನುಭವಿಗಳಿರಲಿಲ್ಲ. ಅದಕ್ಕಾಗಿಯೇ ಅವರು ಅದನ್ನು ನಿರಾಕರಿಸಿದ್ದರು. ಆದರೆ, ಕೆಲ ವರ್ಷಗಳ ಹಿಂದೆ ಜನಾರ್ದನ ಗೌಡ ಅವರು ಜಿಪಂನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿದ್ದಾಗ ಸಭೆ ನಡೆಸಿ ಫಲಾನುಭವಿಗಳ ಕುಂದು ಕೊರತೆಗಳನ್ನು ಪರಿಶೀಲಿಸಿ ಪಾವತಿ ಮಾಡಬೇಕಿದ್ದ ಶೇ.25ನ್ನು ಮನ್ನಾ ಮಾಡಿ ಜಾಗದ ಹಕ್ಕುಪತ್ರವನ್ನೂ ನೀಡಲಾಗಿತ್ತು. ಆದರೆ ಅಷ್ಟೊತ್ತಿಗೆ ಈ ಜಾಗದ ಫಲಾನುಭವಿಗಳಲ್ಲಿ ಕೆಲವು ಜನ ವಿಧಿವಶರಾಗಿದ್ದರು. ಅದನ್ನು ಇನ್ನಿತರರು ಅಕ್ರಮ ಮಾಡಿಕೊಂಡಿದ್ದಾರೆ. ಇದಿಷ್ಟೇ ಅಲ್ಲದೇ ಅಲ್ಲಿ ಬೃಹತ್ ಪ್ರಮಾಣದಲ್ಲಿ ಕೆಂಪುಕಲ್ಲಿನ ಕೋರೆಯನ್ನು ನಿರ್ಮಿಸಲಾಗಿದ್ದು, ಅಕ್ರಮವಾಗಿ ಯಾಂತ್ರೀಕೃತ ಗಣಿಗಾರಿಕೆ ನಡೆಸಲಾಗುತ್ತಿದೆ. ಕೊರಗರಿಗೆ ಸರಕಾರ ಸದುದ್ದೇಶದಿಂದ ಕೊಟ್ಟಿರುವ ಜಮೀನನ್ನು ಅಕ್ರಮವಾಗಿ ಬಳಸಿಕೊಂಡು ನಡೆಸಲಾಗುತ್ತಿರುವ ಗಣಿಗಾರಿಕೆಯಿಂದ ಇಲ್ಲಿ ವಾಸವಾಗಿರುವ ಬಡ ಕೊರಗ ಕುಟುಂಬಗಳಿಗೆ ದಿನಂಪ್ರತಿ ಆತಂಕ ಮನೆ ಮಾಡಿದೆ. ಈ ಬಗ್ಗೆ ತಹಶೀಲ್ದಾರ್ ಅವರಿಗೂ ದೂರು ನೀಡಿರುವ ಈ ಜಾಗದ ಫಲಾನುಭವಿಗಳಾದ ಆನಂದ ಶಾಂತಿ ಎಂಬವರಿಗೆ ಇದುವರೆಗೆ ನ್ಯಾಯ ದೊರಕಿಲ್ಲ. ದೂರು ನೀಡಿ ಒಂದು ವರ್ಷವಾದರೂ ತಹಶೀಲ್ದಾರ್‌ರಿಂದ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ ಎಂದವರು ಆರೋಪಿಸಿದ್ದಾರೆ.

ಕೊಡ್ಯಡ್ಕದ ಬಂಕಿಮಜಲು ಪ್ರದೇಶದಲ್ಲಿ ಕೊರಗರಿಗೆ ಮೀಸಲಿಟ್ಟಿರುವ ಜಾಗದಲ್ಲಿ ಕೆಂಪು ಕಲ್ಲಿನ ಕೋರೆ ನಡೆಯುತ್ತಿರುವುದರ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ. ಆದರೂ ಸದ್ಯದಲ್ಲೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.

ಮುಹಮ್ಮದ್ ಇಸಾಕ್, ಮೂಡುಬಿದಿರೆ ತಹಶೀಲ್ದಾರ್.

share
ಹಾರಿಸ್ ಹೊಸ್ಮಾರ್
ಹಾರಿಸ್ ಹೊಸ್ಮಾರ್
Next Story
X