ಯೆನೆಪೊಯ ವಿವಿಯಲ್ಲಿ ಇಸ್ಲಾಮಿಕ್ ಶಿಕ್ಷಣ, ಸಂಶೋಧನಾ ಕೇಂದ್ರ

ಮಂಗಳೂರು, ಎ.6: ಇಸ್ಲಾಮಿಕ್ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಯೆನೆಪೊಯ ವಿಶ್ವವಿದ್ಯಾನಿಲಯ, ಮಂಗಳೂರಿನಲ್ಲಿ ನಡೆಯಿತು. ಕೇಂದ್ರದ ಯಶಸ್ಸಿಗಾಗಿ ಪವಿತ್ರ ಕುರ್‌ಆನ್ ಪಠಣದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ವಿಶ್ವವಿದ್ಯಾನಿಲಯದ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಮುಖ್ಯಅತಿಥಿಯಾಗಿದ್ದರು.ಉಪಕುಲ ಪತಿ ಡಾ.ವಿಜಯಕುಮಾರ್, ಕುಲಸಚಿವ ಡಾ.ಶ್ರೀಕುಮಾರ್ ಮೆನನ್, ಹಣಕಾಸು ನಿರ್ದೇಶಕ ಫರ್ಹಾದ್ ಯೆನೆಪೊಯ, ಇಸ್ಲಾಮಿಕ್ ಶಿಕ್ಷಣ ಹಾಗೂ ವಿಶ್ವವಿದ್ಯಾ ನಿಲಯದ ಇತರ ಕಾನೂನು ಅಧಿಕಾರಿಗಳು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು. ಡಾ.ಜಾವೆದ್ ಜಮೀಲ್ ಅವರನ್ನು ಕೇಂದ್ರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
Next Story





