ತೋಡಾರಿನಲ್ಲಿ ರಸ್ತೆ ಅಪಘಾತ: ಓರ್ವ ಮೃತ್ಯು, ಇನ್ನೋರ್ವನಿಗೆ ಗಾಯ
.gif)
ಮೂಡುಬಿದಿರೆ, ಎ.7: ಟೆಂಪೊ ಮತ್ತು ವ್ಯಾಗನರ್ ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ತೋಡಾರಿನಲ್ಲಿ ಸಂಭವಿಸಿದೆ.
ಮೃತರನ್ನು ಕಾರು ಪ್ರಯಾಣಿಕ ಬೆಂಗಳೂರು ಮೂಲದ ಮನೋಹರ್ ಎಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಮನೋಹರ್ ಅವರ ಸಹದ್ಯೋಗಿ ಗಂಭೀರ ಗಾಯಗೊಂಡಿದ್ದು, ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಮಂಗಳೂರು ತಾಲೂಕಿನ ಗಂಜಿಮಠದಲ್ಲಿರುವ ಬ್ಯಾಗ್ ತಯಾರಿಕಾ ಘಟಕದಲ್ಲಿ ಉದ್ಯೋಗದಲ್ಲಿದ್ದ ಮನೋಹರ್ ತನ್ನ ಸಹದ್ಯೋಗಿಯೊಂದಿಗೆ ಕಾರಿನಲ್ಲಿ ಹಾವೇರಿಗೆಂದು ಪ್ರಯಾಣ ಬೆಳೆಸಿದ್ದರು. ಹಾವೇರಿಯಲ್ಲಿ ನಡೆಯಲಿರುವ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಇವರು ತೆರಳುತ್ತಿದ್ದರೆನ್ನಲಾಗಿದೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





