ದ.ಕ. ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ

ಮಂಗಳೂರು, ಎ.7: ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯ ಹಲವೆಡೆ ಇಂದು ಮುಂಜಾನೆ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ.
ಮಂಗಳೂರು ನಗರದಲ್ಲಿ ಮುಂಜಾನೆ 3:30ರ ಸುಮಾರಿಗೆ ಆರಂಭಗೊಂಡ ಮಳೆ ಅರ್ಧ ತಾಸಿಗಿಂತಲೂ ಅಧಿಕ ಸಮಯ ಸುರಿದಿದೆ. ಇದರೊಂದಿಗೆ ಗುಡುಗು, ಮಿಂಚು ಕೂಡಾ ಇತ್ತು. ಅದೇರೀತಿ ಬಂಟ್ವಾಳ ಹಾಗೂ ಪುತ್ತೂರು ತಾಲೂಕಿನ ಹಲವೆಡೆಗಳಲ್ಲಿ ಇಂದು ಮುಂಜಾನೆ ಸಾಧಾರಣ ಮಳೆಯಾಗಿದೆ.
ಬಿರು ಬಿಸಿಲಿನಿಂದ ತತ್ತರಿಸಿದ್ದ ಜನತೆಗೆ ಮಳೆ ತಂಪೆರೆದಿದ್ದು, ವಾತಾವರಣ ಒಂದಿಷ್ಟು ತಂಪಾಗಿದೆ.
Next Story





