ಅಜ್ಮೀರ್ ಸ್ಫೋಟ: ಅಸೀಮಾನಂದ ದೋಷ ಮುಕ್ತ ವಿರುದ್ಧ ದರ್ಗಾದ ಆಡಳಿತಾಧಿಕಾರಿಗಳು ಹೈಕೋರ್ಟಿಗೆ

ಜೈಪುರ, ಎ. 7: ಅಜ್ಮೀರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಸೀಮಾನಂದಸಹಿತ ಏಳು ಮಂದಿಯನ್ನು ಆರೋಪ ಮುಕ್ತಗೊಳಿಸಿದ್ದನ್ನುಪ್ರಶ್ನಿಸಿ ಖ್ವಾಜಾ ಮುಯಿನುದ್ದೀನ್ ಚಿಸ್ತಿ ದರ್ಗಾದ ಪುರೋಹಿತರ ಸಮಿತಿ ಹೈಕೋರ್ಟಿನ ಮೊರೆಹೋಗಲು ನಿರ್ಧರಿಸಿದೆ.
ಸಾಕ್ಷಿಗಳು ತಿರುಗಿಬಿದ್ದಿದ್ದು, ಪ್ರಕರಣದಲ್ಲಿ ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಪುರೋಹಿತರ ಸಮಿತಿ ಅಂಜುಮನ್ ಸಯ್ಯಿದ್ ಸದ್ಗೊನ್ನ ಪ್ರಧಾನಕಾರ್ಯದರ್ಶಿ ಸಯ್ಯಿದ್ ವಾಹಿದ್ ಅನ್ಗಾರ್ ಶಾ ಚಿಸ್ತಿ ತಿಳಿಸಿದ್ದಾರೆ.
ಪ್ರಕರಣದ ಪ್ರಧಾನ ಆರೋಪಿಗಳಾದ ಸಂದೀಪ್ ಡಾಂಗೆ, ಸುರೇಶ್ ನಾಯರ್, ರಾಮಚಂದ್ರ ಕಾಲ್ಸಂಗ್ರರು ಭೂಗತರಾಗಿದ್ದಾರೆಂದು ತನಿಖೆ ನಡೆಸಿದ ಎನ್ಐಎ ಘೋಷಿಸಿತ್ತು.
ಪ್ರಕರಣದಲ್ಲಿ ದೇವೇಂದ್ರ ಗುಪ್ತ, ಭವೇಶ್ ಜೋಷಿಗೆ ಎನ್ಐಎ ಕೋರ್ಟು ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಪಟ್ಟಿಯಲ್ಲಿದ್ದ ಸುನೀಲ್ ಜೋಷಿ ನಿಗೂಢರೀತಿಯಲ್ಲಿ ಕೊಲೆಯಾಗಿದ್ದರು. 2007ರ ಅಕ್ಟೋಬರ್ 11 ರಂದು ನಡೆದಿದ್ದ ಬಾಂಬು ಸ್ಫೋಟದಲ್ಲಿ ಮೂರು ಮಂದಿ ಮೃತರಾಗಿದ್ದರು.
Next Story





