ಅಕ್ಷಯ್ ಕುಮಾರ್ ಶ್ರೇಷ್ಠ ನಟ, ಸುರಭಿ ಅತ್ಯುತ್ತಮ ನಟಿ
64ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ

ಹೊಸದಿಲ್ಲಿ, ಎ.7: 64ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಇಲ್ಲಿ ಪ್ರಕಟಿಸಲಾಗಿದ್ದು, ಅಕ್ಷಯ್ ಕುಮಾರ್ ಅತ್ಯುತ್ತಮ ನಟ, ಮಲಯಾಳಂನ ಸುರಭಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ನೀರ್ಜಾ’ ಅತ್ಯುತ್ತಮ ಹಿಂದಿ ಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ‘ರಿಜರ್ವೇಷನ್’ ಕನ್ನಡದ ಶ್ರೇಷ್ಠ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.
ಟಿ.ಎಸ್. ನಾಗಾಭರಣ ನಿರ್ದೇಶನದ ‘ಅಲ್ಲಮ’ ಚಿತ್ರಕ್ಕೂ ಶ್ರೇಷ್ಠ ಸಂಗೀತ ನಿರ್ದೇಶನ ಪ್ರಶಸ್ತಿ ಲಭಿಸಿದೆ.
ಅಕ್ಷಯ್ ಕುಮಾರ್ ‘ರುಸ್ತುಮ್’ ಚಿತ್ರದಲ್ಲಿ ನೀಡಿರುವ ಅಭಿನಯಕ್ಕೆ ಹಾಗೂ ಸುರಭಿ ಅವರು ‘ಮಿನ್ನಮಿನುಂಗು’ ಚಿತ್ರದ ಅಭಿನಯಕ್ಕೆ ಕ್ರಮವಾಗಿ ಶ್ರೇಷ್ಠ ನಟ ಹಾಗೂ ನಟಿ ಪ್ರಶಸ್ತಿ ಪಡೆದಿದ್ದಾರೆ. ‘ದಂಗಲ್’ ಚಿತ್ರದಲ್ಲಿ ಗೀತಾ ಫೋಗತ್ ಪಾತ್ರ ನಿರ್ವಹಿಸಿದ್ದ ಕಾಶ್ಮೀರದ ಕುವರಿ ಝೈರಾ ವಾಸಿಂ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
64ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಇಂತಿದೆ:
ಶ್ರೇಷ್ಠ ಚೊಚ್ಚಲ ಚಿತ್ರ ನಿರ್ದೇಶಕ: ದೀಪ್ ಚೌಧರಿ(ಅಲಿಫಾ)
ಶ್ರೇಷ್ಠ ಮಕ್ಕಳ ಚಿತ್ರ: ‘ಧನಕ್’(ಹಿಂದಿ)
ಸಾಮಾಜಿಕ ಕಳಕಳಿಯ ಉತ್ತಮ ಚಿತ್ರ: ‘ಪಿಂಕ್’
ಶ್ರೇಷ್ಠ ನಿರ್ದೇಶಕ: ರಾಜೇಶ್ ಮಪುಸ್ಕರ್(ವೆಂಟಿಲೇಟರ್)
ಶ್ರೇಷ್ಠ ನಟ: ಅಕ್ಷಯ್ ಕುಮಾರ್(ರುಸ್ತುಮ್)
ಶ್ರೇಷ್ಠ ನಟಿ: ಸುರಭಿ ಲಕ್ಷ್ಮೀ(ಮಿನ್ನಮಿನುಂಗು)
ಶ್ರೇಷ್ಠ ಪೋಷಕ ನಟಿ: ಝೈರಾ ವಾಸಿಮ್(ದಂಗಲ್)
ಶ್ರೇಷ್ಠ ಬಾಲನಟರು: ಆದೀಶ್ ಪ್ರವೀಣ್(ಕಾಂಜು ದೈವಂ), ಸಾಜ್(ನೂರ್ ಇಸ್ಲಾಮ್), ಮನೋಹರ(ರೈಲ್ವೇ ಚಿಲ್ಡ್ರನ್ಸ್)
ಶ್ರೇಷ್ಠ ಹಿನ್ನೆಲೆ ಗಾಯಕ-ಸುಂದರ ಐಯ್ಯರ್(ಜೋಕರ್)
ಶ್ರೇಷ್ಠ ಹಿನ್ನೆಲೆ ಗಾಯಕಿ-ಎಮಾನ್ ಚಕ್ರವರ್ತಿ(ತುಮಿ ಜಾಕೆ)
ಶ್ರೇಷ್ಠ ಚಿತ್ರಕಥೆ(ಮೂಲ ಕಥೆ): ಶ್ಯಾಮ್ ಪುಷ್ಕರಣ್(ಮಹೆಶಿಂಟೆ ಪ್ರತೀಕಾರಂ)
ಶ್ರೇಷ್ಠ ಚಿತ್ರಕಥೆ(ಎರವಲು ಕಥೆ)-ಸಂಜಯ್ ಕೃಷ್ಣಾಜಿ ಪಾಟೀಲ್(ದಶಕ್ರಿಯ)
ಶ್ರೇಷ್ಠ ಸಂಕಲನ: ರಾಮೇಶ್ವರ್(ವೆಂಟಿಲೇಟರ್)
ಶ್ರೇಷ್ಠ ವಸ್ತ್ರವಿನ್ಯಾಸ: ಸಚಿನ್(ಮರಾಠಿ ಚಿತ್ರ)
ಶ್ರೇಷ್ಠ ಸಂಗೀತ ನಿರ್ದೇಶನ: ಬಾಬು ಪದ್ಮನಾಭ ('ಅಲ್ಲಮ' ಕನ್ನಡ ಚಿತ್ರ)
ಶ್ರೇಷ್ಠ ಚಲನಚಿತ್ರ ಚಿತ್ರಗಳು
'ಮದಿಪು' (ತುಳು)
ಜೋಕರ್(ತಮಿಳು)
ರಾಂಗ್‌ಸೈಡ್ ರಾಜು(ಗುಜರಾತಿ)
ಪೆಲ್ಲಿ ಚುಪುಲು(ತೆಲುಗು)
ದಶಕ್ರಿಯ(ಮರಾಠಿ)
ಬಿಸರ್ಜನ್(ಬಂಗಾಳಿ)
ಮಹೆಶಿಂಟೆ ಪ್ರತೀಕಾರಂ(ಮಲಯಾಳಂ)
ಕೇ ಸರಾ ಸರಾ(ಕೊಂಕಣಿ)
'ರಿಸರ್ವೇಷನ್'(ಕನ್ನಡ)
ನೀರ್ಜಾ(ಹಿಂದಿ)







