ರೋಹಿಂಗ್ಯನ್ನರು ಕೊಲೆಯಾಗಿದ್ದಾರೆ; ಅದರೆ ಅದು ಜನಾಂಗೀಯ ನಿರ್ಮೂಲನವಲ್ಲ: ಆಂಗ್‌ಸಾನ್ ಸೂಕಿ

ಲಂಡನ್, ಎ. 7: ಮ್ಯಾನ್ಮಾರ್‌ನ ರಾಖಿನೆ ರಾಜ್ಯದಲ್ಲಿ ಭಯೋತ್ಪಾದಕರು ರೋಹಿಂಗ್ಯ ಮುಸ್ಲಿಮರನ್ನು ಕೊಲೆಮಾಡಿದ್ದು ನಿಜ. ಆದರೆ ಅದು ಒಂದು ಜನಾಂಗೀಯ ನಿರ್ಮೂಲನಾ ಕೃತ್ಯವಲ್ಲ ಎಂದು ಶಾಂತಿ ನೊಬೆಲ್ ಪುತಸ್ಕೃತೆ ಪಾರಿತೋಷಕ ವಿಜೇತೆ ಮತ್ತು ಮ್ಯಾನ್ಮಾರ್ ಆಡಳಿತ ಪಕ್ಷ ನಾಯಕಿ ಆಂಗ್ ಸಾನ್ ಸೂಕಿ ಹೇಳಿದ್ದಾರೆ. ಭಯೋತ್ಪಾದಕರ ದಾಳಿಗೆ ಹೆದರಿ ಬಾಂಗ್ಲಾದೇಶ ಮುಂತಾದೆಡೆ ಪಲಾಯನ ಮಾಡಿರುವ ರೋಹಿಂಗ್ಯನ್ ಸಮುದಾಯದವರು ಮ್ಯಾನ್ಮಾರ್‌ಗೆ ಮರಳಬೇಕೆಂದು ಅವರು ಆಗ್ರಹಿಸಿದರು.
ರೋಹಿಂಗ್ಯ ವಿಷಯದಲ್ಲಿ ಸೂಕಿ ಸುದೀರ್ಘ ಮೌನವಹಿಸಿದ್ದರು. ಇದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ರಾಖಿನೆಯಲ್ಲಿ ಜನಾಂಗೀಯ ನಿರ್ಮೂಲನೆ ನಡೆದಿಲ್ಲ. ಹಾಗೆ ಹೇಳುವುದು ಸ್ವಲ್ಪ ಕಟುವಾದ ಭಾಷೆಯಾಗಿದೆ. ಘಟನೆಯ ಕುರಿತು ತಾನು ದೀರ್ಘ ಮೌನವಹಿಸಿದ್ದನ್ನು ಸೂಕಿ ಸಮರ್ಥಿಸಿಕೊಂಡರು. 2013ರಲ್ಲಿ ಮೊದಲ ಘರ್ಷಣೆಯಾದಾಗ ಪತ್ರಕರ್ತರು ತನ್ನ ಪ್ರತಿಕ್ರಿಯೆ ಕೇಳಿದ್ದರು.
ಆದರೆ ಅದು ಜನರು ಬಯಸಿದ ಪ್ರತಿಕ್ರಿಯೆಆಗಿರಲಿಲ್ಲ. ಆದ್ದರಿಂದ ತಾನು ಮೌನವಹಿಸಿದೆ ಎಂದು ವರದಿ ಬಂತು. ಕಳೆದ ಅಕ್ಟೋಬರ್‌ನಲ್ಲಿ ನಡೆದ ಘರ್ಷಣೆಯ ಕಾರಣಗೊತ್ತಿಲ್ಲ. ಸರಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಶಾಂತಿ ಪ್ರಯತ್ನಗಳನ್ನು ವಿಫಲಗೊಳಿಸಲು ಈ ಘರ್ಷಣೆ ನಡೆದಿರಬಹುದೇ ಎನ್ನುವ ಸಂಶಯ ತನಗಿದೆ ಎಂದು ಸೂಕಿ ಹೇಳಿದರು. ರಾಖಿನೆಯಲ್ಲಿ ರೋಹಿಂಗ್ಯನ್ನರ ವಿರುದ್ಧ ಸೈನ್ಯ ಅತಿಕ್ರಮಣ ನಡೆಸಿದ್ದರೆ ಅದನ್ನು ಪರಿಶೀಲಿಸಲಾಗುವುದು. ದೇಶದಲ್ಲಿ ಹೆಚ್ಚು ಮಂದಿಗೆ ಉದ್ಯೋಗ ಒದಗಿಸುವುದು, ಗೋತ್ರವಿಭಾಗದವರ ಸಮಸ್ಯೆಗಳನ್ನು ಬಗೆಹರಿಸುವುದು ಮುಂತಾದ ಕಾರ್ಯಕ್ರಮಗಳಿಗೆ ಸರಕಾರ ಆದ್ಯತೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.







