ಹಲ್ಲೆಗೊಳಗಾದ ಎಎಸ್ಸೈಯ ಆರೋಗ್ಯ ವಿಚಾರಿಸಿದ ಕಮಿಷನರ್

ಮಂಗಳೂರು, ಎ.7: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉರ್ವಾ ಪೊಲೀಸ್ ಠಾಣಾ ಎಎಸ್ಸೈ ಐತಪ್ಪರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐತಪ್ಪರ ಆರೋಗ್ಯ ವಿಚಾರಿಸಿದ ಕಮಿಷನರ್ ಚಂದ್ರಶೇಖರ್ ಅವರು ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಐತಪ್ಪರಿಗೆ ಇಲಾಖೆಯಿಂದ ವೈಯುಕ್ತಿಕವಾಗಿ 25 ಸಾವಿರ ರೂ. ಪರಿಹಾರ ನೀಡುವುದಾಗಿ ಪ್ರಕಟಿಸಿದ ಅವರು, ಕುಟುಂಬದ ಬಳಕೆಗೆ ಇಲಾಖೆ ವಾಹನ ಮತ್ತು ಸರಕಾರದಿಂದ 2 ಲಕ್ಷ ರೂ. ಪರಿಹಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
Next Story





