ಮುಸ್ಲಿಂ ಯುವಜನ ವೇದಿಕೆ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಆಯ್ಕೆ

ವಿಟ್ಲ, ಎ.7: ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಮುಸ್ಲಿಂ ಯುವಜನ ವೇದಿಕೆಯ ನೂತನ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಪಿ.ಜೆ. ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ವೇದಿಕೆಯ 29ನೆ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಅಬ್ದುಲ್ ಹಮೀದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಶರೀಫ್‌ಅಕ್ಕರಂಗಡಿ ಕಳೆದ ಸಾಲಿನ ಆಯವ್ಯಯ ಮಂಡಿಸಿದರು. ಉಪಾದ್ಯಕ್ಷರಾಗಿ ಇಜಾಝ್ ಅಹ್ಮದ್ ಹಾಗೂ ತಸ್ಲೀಂ ಆರಿಫ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಶ್ರಫ್, ಜೊತೆ ಕಾರ್ಯದರ್ಶಿಯಾಗಿ ಉಸ್ಮಾನ್, ಕೋಶಾಧಿಕಾರಿಯಾಗಿ ಅಬ್ದುಲ್ ಖಾದರ್ ಅವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಇಕ್ಬಾಲ್ ಪಿ.ಎಂ., ಅಬ್ದುಲ್ ಹಮೀದ್, ಮುಹಮ್ಮದ್ ಶರೀಫ್, ರಫೀಕ್ ಪಿ.ಎಂ., ಮುಹಮ್ಮದ್ ಆಸಿಫ್, ಝೈನುದ್ದೀನ್, ಅಬ್ದುಲ್ ನಾಸಿರ್ ಎ.ಆರ್. ಅವರನ್ನು ನೇಮಿಸಲಾಯಿತು
Next Story





