ಸೌದಿಅರೇಬಿಯ: ಸ್ವದೇಶಿಯರ ನಿರುದ್ಯೋಗದಲ್ಲಿ ಹೆಚ್ಚಳ

ರಿಯಾದ್, ಎ.7: ಸೌದಿ ಅರೇಬಿಯ ಕಾರ್ಮಿಕ ಸಚಿವಾಲಯ 2011ರಲ್ಲಿ ದೇಶದಲ್ಲಿ ಖಾಸಗಿ ಕ್ಷೇತ್ರಗಳಲ್ಲಿ ಸ್ವದೇಶೀಕರಣಕ್ಕಾಗಿ ನಿತಾಕತ್ ವ್ಯವಸ್ಥೆಯನ್ನು ಜಾರಿಗೊಳಿಸಿತು. ಆದರೂ ಸೌದಿ ಪ್ರಜೆಗಳಲ್ಲಿ ನಿರುದ್ಯೋಗ ಹೆಚ್ಚಳವಾಗಿದೆ ಎಂದು ಸೆನ್ಸಸ್ ಅಥಾರಿಟಿ ಹೇಳಿದೆ.2016ರ ಕೊನೆಯಲ್ಲಿ ಸ್ವದೇಶಿಯರ ನಡುವೆ 12.3 ಶೇಕಡ ನಿರುದ್ಯೋಗ ಇದೆ ಎಂದು ಹೊಸ ಲೆಕ್ಕಬಹಿರಂಗಪಡಿಸಿದೆ.
2015ರ ಕೊನೆಯಲ್ಲಿ 11.6ಶೇಕಡ ನಿರುದ್ಯೋಗವಿದ್ದರೆ, 2016ರಲ್ಲಿ ಅದು ಹೆಚ್ಚಳಗೊಂಡಿದೆ. ಮಹಿಳೆಯರಲ್ಲಿ ಹೆಚ್ಚು ಮಂದಿ ನಿರುದ್ಯೋಗಿಗಳಾಗಿದ್ದಾರೆ. ನಿತಾಕತ್ ಆರಂಭಿಸಿದ 2011ರಲ್ಲಿ 11.4 ಶೇಕಡ ಮಂದಿ ಸ್ವದೇಶಿಯರು ನಿರುದ್ಯೋಗಿಗಳಾಗಿದ್ದರು. ಉದ್ಯೋಗ ಹೆಚ್ಚಿಸಲಿಕ್ಕಾಗಿ ನಿತಾಕತ್‌ನ್ನು ಜಾರಿಗೊಳಿಸಲಾಗಿದೆ. ಆದರೆ ಅದು ಯಶಸ್ವಿಯಾಗಿಲ್ಲ ಎಂದು ಅಥಾರಿಟಿಯ ಲೆಕ್ಕಗಳು ವಿವರಿಸುತ್ತವೆ. ದೇಶದ ಅಧಿಕೃತ ಕಾನೇಶು ಮಾರಿ ನಡೆಸುವ ಹಕ್ಕು ಅಥಾರಿಟಿಯದ್ದಾಗಿದೆ. ಇದನ್ನು ಬಹಿರಂಗಗೊಳಿಸುವ ಹಕ್ಕು ನಮಗಿದೆ ಎಂದು ಸ್ವದೇಶಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸೆನ್ಸಸ್ ಅಥಾರಿಟಿ ಮುಖ್ಯಸ್ಥ ಡಾ. ಫಹದ್ ಅತ್ತಿಖೈಫಿ ಹೇಳಿದ್ದಾರೆ.





