141.13 ಕೋ.ರೂ.ಗಳ ಹೊಸನೋಟುಗಳು ವಶ

ಹೊಸದಿಲ್ಲಿ,ಎ.7: ಆದಾಯ ತೆರಿಗೆ ಇಲಾಖೆ (ಐಟಿ), ಜಾರಿ ನಿರ್ದೇಶನಾಲಯ (ಇಡಿ)ಮತ್ತು ಇತರ ಕಾನೂನು ಜಾರಿ ಏಜೆನ್ಸಿಗಳು ದೇಶದ ವಿವಿಧೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ 141.13 ಕೋ.ರೂ.ವೌಲ್ಯದ ಹೊಸ 500 ಮತ್ತು 2,000 ರೂ.ನೋಟುಗಳನ್ನು ವಶಪಡಿಕೊಂಡಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.
ಈ ಪೈಕಿ ಐಟಿ 110 ಕೋ.ರೂ., ಇಡಿ 4.54 ಕೋ.ರೂ., ಸಿಬಿಐ 26.21 ಕೋ.ರೂ. ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) 38 ಲ.ರೂ.ಗಳನ್ನು ವಶಪಡಿಸಿಕೊಂಡಿವೆ. ಇಡಿ ವಶಪಡಿಸಿಕೊಂಡಿದ್ದ ಎಲ್ಲ ಹೊಸನೋಟುಗಳನ್ನು ಪುನಃ ಚಲಾವಣೆಗೆ ಬರುವಂತೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಜಮಾ ಮಾಡಲಾಗಿದೆ ಎಂದರು.
Next Story





