ಬಜ್ಪೆ: ಮೂರು ದಿವಸಗಳ ಆಧ್ಯಾತ್ಮಿಕ ಸಂಗಮ ಸಮಾಪ್ತಿ

ಬಜ್ಪೆ, ಎ.6: ಎಸ್‌ವೈಎಸ್ ಬಜ್ಪೆ ಸೆಂಟರ್, ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಮತ್ತು ಕೆಸಿಎಫ್ ಬಜ್ಪೆ ಇದರ ಅಧೀನದಲ್ಲಿ ಮೂರು ದಿವಸಗಳ ಆಧ್ಯಾತ್ಮಿಕ ಸಂಗಮವು ಎಪ್ರಿಲ್ 6 ಗುರುವಾರ ಸಮಾಪ್ತಿಗೊಂಡಿತು.
ಇಲ್ಲಿನ ಬಣಕಲ್ ಕಂಪೌಂಡಿನಲ್ಲಿ ಮಂಗಳವಾರ ಆರಂಭಗೊಂಡ ಆಧ್ಯಾತ್ಮಿಕ ಸಂಗಮವನ್ನು ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಶನ್ ಅಧ್ಯಕ್ಷ ಹಾಫಿಲ್ ಮಜೀದ್ ಫಾಳಿಲಿ ಅಲ್ ಕಾಮಿಲ್ ಉದ್ಘಾಟಿಸಿದರು, ಜಬ್ಬಾರ್ ಸಖಾಫಿ ಪಾತೂರು ರಜಬ್ ಸಂದೇಶ ಭಾಷಣ ಮಾಡಿದರು, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ನೇತೃತ್ವ ವಹಿಸಿದ್ದರು. ಎರಡನೇ ದಿನವಾದ ಬುಧವಾರ ಉಮರುಲ್ ಫಾರೂಖ್ ಸಖಾಫಿ ಕಾಟಿಪಳ್ಳ ಅನುಸ್ಮರಣಾ ಭಾಷಣ ಮಾಡಿದರು. ಸಯ್ಯಿದ್ ಶಿಹಾಬುದ್ದೀಲ್ ಹೈದ್ರೋಸ್ ಕಿಲ್ಲೂರು ತಂಙಳ್ ದುಆಶಿರ್ವಚನ ಮಾಡಿದರು.
ಕಾರ್ಯಕ್ರಮದ ಸಮಾರೋಪ ದಿನವಾದ ನಿನ್ನೆ ಗುರುವಾರ ಸಯ್ಯಿದ್ ಜಅ್‌ಫರ್ ಸ್ವಾದೀಖ್ ತಂಙಳ್ ಕುಂಬೋಳ್ ರವರ ನೇತೃತ್ವದಲ್ಲಿ ಜಲಾಲಿಯಾ ರಾತೀಬ್ ಮಜ್ಲಿಸ್ ನಡೆಯಿತು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸುಪ್ರೀಂ ಕೌನ್ಸಿಲ್ ಚೇರ್ಮೆನ್ ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಮಾರೋಪ ಭಾಷಣ ಮಾಡಿದರು.
ಈ ವೇಳೆ ಎಂ.ಎಸ್ ಶಾಮಿಯಾನ ಮಾಲಕ ದಾನಿ ಎಂ.ಎಸ್ ಮನ್ಸೂರ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬಜ್ಪೆ ಎಂಜೆಎಂ ಖತೀಬ್ ಅಬ್ದುರ್ರಝಾಖ್ ಮದನಿ, ಅಧ್ಯಕ್ಷ ಹಾಜಿ ಇಸ್ಮಾಈಲ್ ಜಾವಳೆ, ಮುದರ್ರಿಸ್ ಅಬ್ದುಲ್ಲಾ ಅಹ್ಸನಿ, ಇಶಾರ ಪಾಕ್ಷಿಕ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ, ಎಸ್‌ವೈಎಸ್ ಸೆಂಟರ್ ಅಧ್ಯಕ್ಷ ಹಾಜಿ ಹನೀಫ್ ಬಜ್ಪೆ, ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಹಾಜಿ ಸಲೀಲ್ ಬಜ್ಪೆ, ಡಿಕೆಎಸ್ಸಿ ಮುಖಂಡ ಶಂಸುದ್ದೀನ್ ಬಳ್ಕುಂಜೆ, ಕರಾವಳಿ ಪ್ರಾಧಿಕಾರದ ಡೈರಕ್ಟರ್ ಮಾಜಿ ಬಜ್ಪೆ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್ ಬಜ್ಪೆ, ದ.ಕ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಅಬ್ದುಲ್ ಖಾದರ್ ಜರಿ ನಗರ, ಎಸ್‌ವೈಎಸ್ ಬಜ್ಪೆ ಸೆಂಟರ್ ಮುಖಂಡರುಗಳಾದ ಅಕ್ಬರ್ ಹಾಜಿ ಬಜ್ಪೆ, ಅಹ್ಮದ್ ಹುಸೈನ್ ಶಾಫಿ ಬಜ್ಪೆ, ಮುಹಮ್ಮದ್ ಬಶೀರ್ ಬಜ್ಪೆ, ಬಿಡಿಎಸ್ ನಝೀರ್ ಬಟ್ರಕೆರೆ ಮುಂತಾದವರು ಉಪಸ್ಥಿತರಿದ್ದರು. ಸೆಕ್ಟರ್ ಅಧ್ಯಕ್ಷ ಬಿ.ಎ ಶಾಕಿರ್ ಅಹ್ಮದ್ ಎಮ್ಮೆಸ್ಸಿ ಸ್ವಾಗತಿಸಿ ವಂದಿಸಿದರು.







