ಕ್ಷಯರೋಗದ ಬಗ್ಗೆ ಜಾಗೃತಿಯ ಉದ್ದೇಶ : ಸಿನೆಮಾ ನಟರು- ಸಂಸದರ ಮಧ್ಯೆ ಟಿ-20 ಪಂದ್ಯ

ಹಿಮಾಚಲ ಪ್ರದೇಶ, ಎ.7: ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಧರ್ಮಶಾಲಾದಲ್ಲಿ ಸಿನೆಮಾ ನಟರ ತಂಡ ಮತ್ತು ಸಂಸದರ ತಂಡದ ಮಧ್ಯೆ ಟಿ-20 ಪಂದ್ಯ ನಡೆಯಲಿದೆ.
ಶನಿವಾರ ಮತ್ತು ಭಾನುವಾರ ಪಂದ್ಯ ನಡೆಯಲಿದ್ದು ಬಾಬ್ಬಿ ಡಿಯೋಲ್ ನೇತೃತ್ವದ ಸಿನೆಮಾ ನಟರ ತಂಡ ಸಂಸದ ಅನುರಾಗ್ ಠಾಕುರ್ ನೇತೃತ್ವದ ಸಂಸದರ ತಂಡದ ವಿರುದ್ಧ ಸೆಣಸಲಿದೆ. ರಾಜೀವ್ ಶುಕ್ಲಾ, ನಿಶಿಕಾಂತ್ ದುಬೆ, ಜಯಂತ್ ಚೌಧರಿ, ದೀಪೇಂದರ್ ಸಿಂಗ್ ಹೂಡ, ಸಂಜಯ್ ಜೈಸ್ವಾಲ್, ಗೌರವ್ ಗೊಗೋಯ್ ಮತ್ತು ಮಾಜಿ ಸಂಸದ ಮುಹಮ್ಮದ್ ಅಝರುದ್ದೀನ್ ಸಂಸದರ ತಂಡದಲ್ಲಿರುತ್ತಾರೆ.
Next Story





