ಪ್ರತಿಭಟನೆಗಳಿಗೆ ಪ್ರತ್ಯೇಕ ಸ್ಥಳ ನಿಗದಿಗೆ ಪರಿಶೀಲನೆ: ಡಿಸಿಪಿ ಡಾ.ಪಾಟೀಲ್

ಮಂಗಳೂರು, ಎ. 7: ನಗರದಲ್ಲಿ ವಿವಿಧ ಪ್ರತಿಭಟನೆ ನಡೆಸುವವರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಸ್ಥಳ ನಿಗದಿ ಪಡಿಸಬೇಕು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗಳನ್ನು ನಡೆಸಲಾಗುತ್ತಿದ್ದು, ಅಲ್ಲಿಗೆ ನಗರದ ವಿವಿಧ ಭಾಗಗಳಿಂದ ಮೆರವಣಿಗೆ ಹೋಗುವಾಗ ಸಂಚಾರ ಅಸ್ತವ್ಯಸ್ತಕ್ಕೆ ಕಾರಣವಾಗುತ್ತಿದೆ. ಪ್ರತಿಭಟನೆ ನಡೆಸಲು ನಗರದ ಹೊರ ವಲಯದಲ್ಲಿ ಸ್ಥಳಾವಕಾಶ ನಿಗದಿ ಪಡಿಸಿದರೆ ಈ ಸಮಸ್ಯೆ ಬರಲಾರದು ಎಂದು ಶುಕ್ರವಾರ ಇಲ್ಲಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಲಹೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಡಾ.ಸಂಜೀವ್ ಪಾಟೀಲ್ ಪ್ರತಿಭಟನೆಗೆ ಪ್ರತ್ಯೇಕ ಜಾಗ ಬೇಕೆನ್ನುವುದು ಹಲವು ವರ್ಷಗಳ ಬೇಡಿಕೆಯಾಗಿದ್ದು, ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದರು.
ಸೆಂಟ್ರಲ್ ಮಾರ್ಕೆಟ್ ಪರಿಸರದಲ್ಲಿ ಕೆಲವು ರಿಕ್ಷಾ ಚಾಲಕರು ಮೀಟರ್ ಹಾಕದೆ ಅಧಿಕ ಬಾಡಿಗೆ ದರ ವಸೂಲಿ ಮಾಡುತ್ತಿದ್ದಾರೆ. ಮತ್ತು ಕೆಲವು ಆಟೋ ರಿಕ್ಷಾಗಳಿಗೆ ಹಿಂಬದಿಯಲ್ಲಿ ಮಿರರ್ (ಕನ್ನಡಿ) ಅಳವಡಿಸಲಾಗಿದ್ದು, ಇದು ಹಿಂಬದಿಯಿಂದ ಬರುವ ವಾಹನಗಳ ಸವಾರರಿಗೆ ರ್ಲಿೆಕ್ಟ್ ಆಗುತ್ತಿದೆ ಎಂಬ ದೂರುಗಳು ಬಂದವು. ಈ ಕುರಿತು ತಪಾಸಣೆ ನಸುವುದಾಗಿ ಅವರು ತಿಳಿಸಿದರು.
ಕಾಟಿಪಳ್ಳ- ಕೃಷ್ಣಾಪುರದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕರು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದು, ಇದನ್ನು ತಡೆಯಲು ಈ ಪ್ರದೇಶದಲ್ಲಿ ಪೊಲೀಸ್ ಸಿಬಂದಿಯನ್ನು ನೇಮಿಸಬೇಕು ಎಂದು ಸಾರ್ವಜನಿಕರೊಬ್ಬರು ಹೇಳಿದರು. ಇದಕ್ಕೆ ಉತ್ತರಿಸಿದ ಎಸಿಪಿ ತಿಲಕ್‌ಚಂದ್ರ ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಟ್ರಾಫಿಕ್ ಪೊಲೀಸ್ ವಿಭಾಗದಲ್ಲಿ ಸಿಬಂದಿ ಕೊರತೆ ಇದೆ. ಆದ್ದರಿಂದ ಟ್ರಾಫಿಕ್ ವಾರ್ಡನ್ ಆಗಿ ಸೇವೆ ಸಲ್ಲಿಸಲು ಸಾರ್ವಜನಿಕರು ಮುಂದೆ ಬಂದರೆ ಉತ್ತಮ ಎಂದು ಸಲಹೆ ಮಾಡಿದರು.
ಳ್ನೀರ್ ರಸ್ತೆಯ ಯೂನಿಟಿ ಮತುತಿ ಹೈಲ್ಯಾಂಡ್ ಆಸ್ಪತ್ರೆಗಳ ಬಳಿ ವಾಹನಗಳನ್ನು ಅಡ್ಡಾ ದಿಡ್ಡಿ ನಿಲ್ಲಿಸುವುದರಿಂದ ಸುಗಮ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ ಎಂದು ದೂರು ಬಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ತಿಲಕ್‌ಚಂದ್ರ ಅವರು, ಈಗಾಗಲೇ ಹಲವು ವಾಹನಗಳಿಗೆ ಲಾಕ್ ಮಾಡಿ ದಂಡ ವಿಧಿಸಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಲಿದೆ ಎಂದರು.
ಬಜ್ಪೆಯಿಂದ ಪಂಪ್‌ವೆಲ್ ಮಾರ್ಗವಾಗಿ ಸ್ಟೇಟ್‌ಬ್ಯಾಂಕ್ ಕಡೆಗೆ ಸಂಚರಿಸುವ ಖಾಸಗಿ ಬಸ್ ಪಂಪ್‌ವೆಲ್‌ಗೆ ಹೋಗದೆ ನಂತೂರು- ಮಲ್ಲಿಕಟ್ಟೆ ಮಾರ್ಗವಾಗಿ ಸ್ಟೇಟ್ ಬ್ಯಾಂಕ್‌ಗೆ ಹೋಗುತ್ತಿದೆ ಎಂದು ಬಜ್ಪೆಯ ಪ್ರಯಾಣಿಕರೊಬ್ಬರು ದೂರು ಸಲ್ಲಿಸಿದರು. ಈ ಬಗ್ಗೆ ಕ್ರಮ ಜರಗಿಸಲಾಗುವುದು. ಇನ್ನು ಮುಂದೆ ಬಸ್ ಚಾಲಕನು ಹಾಗೆ ಮಾಡಿದಾಗ ತಮಗೆ ಸ್ಥಳದಿಂದಲೇ ದೂರು ಕೊಡಿ ಎಂದು ಸಲಹೆ ಮಾಡಿದರು.
ಹಂಪನ್‌ಕಟ್ಟೆಯಲ್ಲಿ ಒಂದು ಬಾರ್ ಬೆಳಗ್ಗೆ 7.30 ಕ್ಕೆ ತೆರೆದು ಮದ್ಯ ಮಾರಾಟ ಮಾರಾಟ ಮಾಡುತ್ತಿದೆ. ಅತ್ತಾವರ ಮತ್ತು ನಂದಿಗುಡ್ಡೆಗಳಲ್ಲಿನ ಗ್ಯಾರೇಜ್‌ಗಳಲ್ಲಿ ರಸ್ತೆ ಬದಿ ವಾಹನ ದುರಸ್ತಿ ಮಾಡುವುದರಿಂದ ಸಂಚಾರಕ್ಕೆ ಅಡಚಣೆ ಆಗುತ್ತಿದೆ ಎಂಬ ದೂರುಗಳಿಗೆ ಈ ಬಗ್ಗೆ ತಪಾಸಣೆ ನಡೆಸಲಾಗುವುದು ಎಂದರು.
ಇಂದು ನಡೆದ 35ನೆ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 26 ಮಂದಿ ಕರೆ ಮಾಡಿದ್ದು ಹಲವು ಸಮಸ್ಯೆಗಳನ್ನು ಪೊಲೀಸರ ಗಮನಕ್ಕೆ ತಂದರು.
ಎಸಿಪಿ ವೆಲೆಂಟೈನ್ ಡಿಸೋಜಾ, ಇನ್ಸ್‌ಪೆಕ್ಟರ್ ರಫೀಕ್, ಎಎಸ್‌ಐ ಯೂಸುಫ್, ಸಿಬಂದಿ ಪುರುಷೋತ್ತಮ ಉಪಸ್ಥಿತರಿದ್ದರು.







