ಬೈಕ್ ಕಳವು ಆರೋಪಿ ಬಂಧನ: ಮೂರು ಬೈಕ್‌ಗಳು ವಶಕ್ಕೆ

ಮಂಗಳೂರು, ಎ. 7: ಕಳ್ಳತನ ಮಾಡಿದ ಬೈಕ್‌ನ್ನು ಮಾರಾಟ ಮಾಡಲೆತ್ನಿಸುತ್ತಿದ್ದಾಗ ಡಿಸಿಐಬಿ ತಂಡ ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುರತ್ಕಲ್ ಕಾಟಿಪಳ್ಳ ನಿವಾಸಿ ಎ.ಹಂಝ (20) ಎಂದು ಗುರುತಿಸಲಾಗಿದೆ. ಸುರತ್ಕಲ್ ನಿವಾಸಿ ಸಿದ್ದೀಕ್ ಯಾನೆ ಮಚ್ಚ ಯಾನೆ ಮಂಚೂ ಪರಾರಿಯಾಗಿದ್ದಾನೆ.
ಕಳವು ಮಾಡಿದ ಬೈಕ್‌ಗಳನ್ನು ಮಾರಾಟ ಮಾಡಲೆತ್ನಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಡಿಸಿಐಬಿ ತಂಡ ದಾಳಿ ನಡೆಸಿ ಆರೋಪಿ ಸಹಿತ ಮೂರು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಬೈಕ್‌ಗಳ ವೌಲ್ಯ 1.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಪೊಲೀಸ್ ಅಧೀಕ್ಷಕ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಐಇ ಪೊಲೀಸ್ ನಿರೀಕ್ಷಕ ಅಮಾನುಲ್ಲಾ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
Next Story





