ಕಾರು ಢಿಕ್ಕಿ: ಪೊಲೀಸ್ ಸಿಬ್ಬಂದಿಗೆ ಗಾಯ

ಕಾರ್ಕಳ, ಎ.7: ಹಿರ್ಗಾನ ಗ್ರಾಮದ ನವದುರ್ಗಾ ಆಟೋ ಇಂಜಿನಿಯ ರಿಂಗ್ ಗ್ಯಾರೇಜ್ ಬಳಿ ಎ.6ರಂದು ಸಂಜೆ ವೇಳೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.
ಕಾರ್ಕಳ ಕಡೆಯಿಂದ ಅಜೆಕಾರು ಕಡೆಗೆ ಹೋಗುವ ರಸ್ತೆಯಲ್ಲಿ ಕಾರ್ಕಳ ನಗರ ಠಾಣಾ ಎಸ್ಸೈ ರವಿ ಎನ್. ಹಾಗೂ ಸಿಬ್ಬಂದಿಗಳು ವಾಹನಗಳನ್ನು ತಪಾಸಣೆ ಮಾಡುತ್ತಿದ್ದು, ಈ ವೇಳೆ ಸುಭೋದ್ ಕುಮಾರ್ ಶೆಟ್ಟಿ ಎಂಬವರು ತಮ್ಮ ಇಕೋ ಕಾರನ್ನು ಚಲಾಯಿಸಿಕೊಂಡು ಬಂದು ವಾಹನ ತಪಾಸಣೆ ಮಾಡುತ್ತಿದ್ದ ಸಿಬ್ಬಂದಿ ಸತೀಶ ಎಂಬವರಿಗೆ ಡಿಕ್ಕಿ ಹೊಡೆದರು. ಇದರಿಂದ ಸತೀಶ್ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





