ಬೆದರಿಕೆಯೊಡ್ಡಿ ಮೊಬೈಲ್ ದರೋಡೆ: ಮೂರು ಆರೋಪಿಗಳ ಬಂಧನ
ಶಿವಮೊಗ್ಗ, ಎ.7: ಸಾರ್ವಜನಿಕರಿಗೆ ಬೆದರಿಕೆಯೊಡ್ಡಿ ಮೊಬೈಲ್ ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಗರದ ಅಶ್ವತ್ಥ್‌ನಗರ ಸಮೀಪದ ಗಾರೆ ಚಾನಲ್ ಬಳಿ ವಿನೋಬನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಟ್‌ಪಟ್ ನಗರದ ನಿವಾಸಿ ಮಲ್ಲೇಶಿ ಯಾನೆ ಮರಿಯಪ್ಪ(20), ಗಾಡಿಕೊಪ್ಪದ ನಿವಾಸಿ, ಪಿಯುಸಿ ವಿದ್ಯಾರ್ಥಿಯಾದ ಭರತ್ ಯಾನೆ ಜಾನ್ ಭರತ್(19) ಹಾಗೂ ಮೇದಾರ ಕೇರಿಯ ನಿವಾಸಿ ಗುರುಮೂರ್ತಿ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರು ಕಳವು ಮಾಡಿದ್ದ ನಾಲ್ಕು ಮೊಬೈಲ್ ಫೋನ್ ಹಾಗೂ ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಬ್ ಇನ್‌ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೋಚುತ್ತಿದ್ದರು: ಕಳೆದ ಕೆಲ ದಿನಗಳ ಹಿಂದೆ ಈ ಮೂವರು ಆರೋಪಿಗಳು, ಸಾಗರ ರಸ್ತೆಯ ನಂಜಪ್ಪ ಲೈಫ್‌ಕೇರ್ ಸಮೀಪ ಪೆಸೆಟ್ ಕಾಲೇಜ್‌ನ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಕೆ ಹಾಕಿದ್ದರು. ನಂತರ ವಿದ್ಯಾರ್ಥಿಯೋರ್ವನ ಬಳಿಯಿದ್ದ ಮೊಬೈಲ್ ಹಾಗೂ ನಗದು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಕುರಿತಂತೆ ವಿನೋಬನಗರ ಪೊಲೀಸ್ ಠಾ ೆಯಲ್ಲಿ ದೂರು ದಾಖಲಾಗಿತ್ತು. ಎಫ್‌ಐಆರ್ ದಾಖಲಿಸಿಕೊಂಡ ಪಿಎಸೈ ರಾಘವೇಂದ್ರ ಕಾಂಡಿಕೆ ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಗಾರೆ ಚಾನಲ್ ಬಳಿ ಅನುಮಾನಾ ಸ್ಪದವಾಗಿ ನಿಂತುಕೊಂಡಿದ್ದ ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ದಾಗ ಕೃತ್ಯ ಬೆಳಕಿಗೆ ಬಂದಿತ್ತು.







