ಸೋದರತ್ತೆಯ ಅತ್ಯಾಚಾರ ಯುವಕನ ಬಂಧನ
ಸುಂಟಿಕೊಪ್ಪ, ಎ.7: ಮಾತು ಬಾರದ ಮೂಗಿಯಾಗಿರುವ ತನ್ನ ಸೋದರ ತ್ತೆಯ ಮೇಲೆ ಯುವಕನೋರ್ವ ಅತಾ್ಯಚಾರ ಎಸಗಿರುವ ಘಟನೆ ಕೊಡಗರಹಳ್ಳಿ ಗ್ರಾಮ
ಪಂಚಾಯತ್ ವ್ಯಾಪ್ತಿ ಯಲ್ಲಿ ನಡೆದಿದೆ. ಅತ್ಯಾಚಾರ ನಡೆಸಿದ ಆರೋಪಿಯನ್ನು ಪ್ರಸಾದ್(23) ಎಂದು ಗುರುತಿಸಲಾಗಿದೆ.
ಸಂಶಯದ ಮೇರೆಗೆ ಈ ಬಗ್ಗೆ ಗ್ರಾಮಸ್ಥರು ಮಹಿಳಾ ಸಹಾಯವಾಣಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಆದರೆ ಈ ಕುರಿತು ಇಲಾಖೆಯು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.
ಇದಿೀಗ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಲಿಖಿತ ದೂರು ಬಂದ ಮೇರೆಗೆ ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ಹಾಗೂ ಪೊಲೀಸರು ಅಂದ ಗೋವೆಯಲ್ಲಿ ನೆಲೆಸಿದ್ದ ಆರೋಪಿ ಪ್ರಸಾದ್‌ನನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ವೇಳೆ ತಾನೇ ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಪೊಲೀಸ ರು ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
Next Story





