ಅಕ್ರಮ ಮರಳು, ದೋಣಿ ವಶ
ಹೊನ್ನಾವರ, ಎ.7: ತಾಲೂಕಿನ ಕುಳಕೋಡದ ಶರಾವತಿ ಕೋಡಿುಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 9 ಸಾವಿರ ರೂ. ವೌಲ್ಯದ ಮರಳು ಹಾಗೂ ಸಾಗಾಟಕ್ಕೆ ಬಳಸಲಾದ ಎರಡು ಯಾಂತ್ರೀಕೃತ ದೋಣಿಗಳನ್ನು ಭಟ್ಕಳ ಉಪವಿಭಾಗಾಧಿಕಾರಿ ಎನ್.ಎಮ್.ಮಂಜುನಾಥ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಕುಳಕೋಡದ ವೆಂಕಟ್ರಮಣ ದತ್ತ ಹೆಗಡೆ ಎಂಬವರ ಮಾಲ್ಕಿ ಜಾಗದಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಅಧಿಕಾರಿಗಳ ತಂಡದ ದಾಳಿಯಲ್ಲಿ ದೋಣಿ ಮಾಲಕರು ಹಾಗೂ ಕಾರ್ಮಿಕರು ಪರಾರಿಯಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.ಮರಳು ಸಾಗಾಟಕ್ಕೆ ಬಳಸಲಾದ ಲಕ್ಷಾಂತರ ರೂ. ವೌಲ್ಯದ ಎರಡು ದೋಣಿಗಳು ಹೊನ್ನಾವರ ಪೊಲೀಸರ ವಶದಲ್ಲಿದ್ದು ಮರಳು ಸಂಗ್ರಹಣಾ ಜಾಗದ ಮಾಲಕ ಹಾಗೂ ದೋಣಿ ಮಾಲಕನ ವಿರುದ್ಧ ಹೊನ್ನಾವರ ಠಾಣೆಯಲಿ ಪ್ರಕರಣ ದಾಖಲಾಗಿದೆ.
Next Story





