ಕಾಂಗ್ರೆಸ್ ಅನುಭವಿಗಳು ಬಿಜೆಪಿಗೆ ಬೇಕೆ?
ಮಾನ್ಯರೆ,
ಚುನಾವಣೆಗಳು ಬಂತೆಂದರೆ ಸಾಕು ನಮ್ಮ ರಾಜಕೀಯ ಪಕ್ಷಗಳು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಾ ‘‘ಹಣ ಹಂಚಿ ಗೆಲ್ಲುತ್ತಿದ್ದಾರೆ’’ ಎಂದು ಕೆಸರೆರಚಾಟ ನಡೆಸುತ್ತಿರುತ್ತವೆ. ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣಾ ಪ್ರಚಾರ ಸಭೆಗಳಲ್ಲಿ ‘‘ಕಾಂಗ್ರೆಸ್ ನವರು ಹಣ ಹಂಚಿಯೇ ಎಲ್ಲಾ ಚುನಾವಣೆಗಳನ್ನು ಗೆದ್ದಿದ್ದು’’ ಎಂದು ಬಿಜೆಪಿ ನಾಯಕರೊಬ್ಬರು ಮೊನ್ನೆ ಮಾಧ್ಯಮದಲ್ಲಿ ಆರೋಪಿಸುತ್ತಿದ್ದರು. ಹೀಗಿದ್ದ ಮೇಲೆ ಇಂತಹ ಕಾಂಗ್ರೆಸ್ ಪಕ್ಷದ ಕೃಷ್ಣರನ್ನು ರೆಡ್ ಕಾರ್ಪೆಟ್ ಹಾಸಿ ಬಿಜೆಪಿಗೆ ಕರೆದುಕೊಂಡದ್ಯಾಕೆ? ತಮ್ಮ ಪಕ್ಷದಲ್ಲೂ ಒಬ್ಬ ಹಣ ಹಂಚುವ ಅನುಭವಿ ಇರಲಿ ಅಂತಲಾ?
Next Story





