ಮಲ್ಯರ ಗೋವಾದ ಕಿಂಗ್ ಫಿಷರ್ ವಿಲ್ಲಾ ಖರೀದಿಸಿದ ಉದ್ಯಮಿ ಸಚಿನ್ ಜೋಷಿ

ಮುಂಬೈ,ಎ.8: ಮದ್ಯದ ದೊರೆ ವಿಜಯ್ ಮಲ್ಯ ಅವರ ಗೋವಾದ ಕಿಂಗ್ ಫಿಷರ್ ವಿಲ್ಲಾ ಕೊನೆಗೂ ಹರಾಜಾಗಿದೆ. ನಟ ಹಾಗೂ ಉದ್ಯಮಿ ಸಚಿನ್ ಜೋಷಿ ವಿಲ್ಲಾವನ್ನು ಖರೀದಿ ಮಾಡಿದ್ದಾರೆ.
ಸಚಿನ್ ಜೋಷಿ ಹರಾಜು ಪ್ರಕ್ರಿಯೆ ವೇಳೆ ನಿಗದಿಪಡಿಸಲಾದ ಪ್ರಾರಂಭಿಕ ದರ 73 ಕೋಟಿ ರೂ.ಗಿಂತ ಅಧಿಕ ಮೊತ್ತವನ್ನು ಪಾವತಿಸಿ ಫಿಷರ್ ವಿಲ್ಲಾವನ್ನು ತನ್ನದಾಗಿಸಿಕೊಂಡಿದ್ದಾರೆ. ಸ್ಟೇಟ್ ಬ್ಯಾಂಕ್ ಇಂಡಿಯಾದ ಅಧ್ಯಕ್ಷೆ ಆರುಂಧತಿ ಭಟ್ಟಾಚಾರ್ಯ ಅವರು ಮಲ್ಯರ ವಿಲ್ಲಾ ಖರೀದಿಯಾಗಿರುವುದನ್ನು ದೃಢಪಡಿಸಿದ್ದಾರೆ. ಆದರೆ ಅವರ ಹೆಸರನ್ನು ಬಹಿರಂಗ ಪಡಿಸಿಲ್ಲ.
ಜೆಎಂಜೆ ಗ್ರೂಪ್ ಆಫ್ ಕಂಪೆನಿಗಳ ಉಪಾಧ್ಯಕ್ಷರಾಗಿರುವ 32ರ ಹರೆಯದ ನಟ ಸಚಿನ್ ಜೋಷಿ ಫಿಟ್ ನೆಸ್ ಕೇಂದ್ರದಿಂದ ಹಿಡಿದು ಹೆಲ್ತ್ ಸ್ಪೇಸ್ ವರೆಗೂ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ
ಈ ಹಿಂದೆ ವಿಜಯ್ ಮಲ್ಯ ಅವರ ವಿಲ್ಲಾವನ್ನು ಹರಾಜು ಹಾಕಿತ್ತಾದರೂ ಖರೀದಿಸುವವರಿಲ್ಲದೇ ಹರಾಜು ಪ್ರಕ್ರಿಯೆ ವಿಫಲಗೊಂಡಿತ್ತು.ಮುಂಬೈ ಮತ್ತು ಗೋವಾದಲ್ಲಿರುವ ಎರಡು ಮನೆಗಳ ಪೈಕಿ ಗೋವಾದ ವಿಲ್ಲಾ ಖರೀದಿಯಾಗಿದೆ





