ವಾಹನ ನೋಂದಣಿ ಇನ್ನು ಕೇಂದ್ರ ಸರಕಾರದ ನಿಯಂತ್ರಣದಲ್ಲಿ

ಹೊಸದಿಲ್ಲಿ, ಎ. 8: ವಾಹನ ನೋಂದಣಿ, ಲೈಸನ್ಸ್ ನವೀಕರಣಮುಂತಾದ ವಿಷಯಗಳಲ್ಲಿ ಕೇಂದ್ರ ಸರಕಾರಕ್ಕೆ ಹೆಚ್ಚಿನ ಅಧಿಕಾರ ಕೊಡಮಾಡುವ ವ್ಯವಸ್ಥೆಯನ್ನು ಜಾರಿಗೆತರಲಿಕ್ಕಾಗಿ ಮೋಟಾರುವಾಹನ ಕಾಯ್ದೆಯಲ್ಲಿ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡಿಸಲಾಗಿದೆ. ರಾಷ್ಟ್ರೀಯ ವಾಹನ ನೋಂದಣಿ ಮಾಡಿಕೊಳ್ಳಲು ಅಗತ್ಯವಾದ ನೋಂದಣಿಕೇಂದ್ರಗಳನ್ನು ಕೇಂದ್ರಸರಕಾರ ಅಧೀನ ಸಂಸ್ಥೆಗಳಿಗೆ ವಹಿಸಿಕೊಡುವ ಕುರಿತು ಮಸೂದೆಯಲ್ಲಿ ವಿವರಿಸಲಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ವಾಹನಗಳಿಗೆ ಸಂಖ್ಯೆ ನೀಡಲು ಕೇಂದ್ರಸರಕಾರ ಬಯಸುತ್ತಿದೆ. ವಾಹನ ನೋಂದಣಿಕ್ಷೇತ್ರದಲ್ಲಿ ಕೇಂದ್ರೀಕೃತ ವ್ಯವಸ್ಥೆ ಮತ್ತು ಆನ್‌ಲೈನ್ ಮೂಲಕ ಜಾರಿಗೆ ತರುವ ಚಿಂತನೆಯನ್ನು ಕೇಂದ್ರಸರಕಾರ ಹೊಂದಿದೆ. ಸ್ಥಾಯಿ ಸಮಿತಿ ಮಸೂದೆಯಲ್ಲಿರುವ ಹೆಚ್ಚಿನ ನಿರ್ದೇಶನಗಳಿಗೆ ಅಂಗೀಕಾರ ನೀಡಿಲ್ಲ. ರಾಜ್ಯಗಳ ಹಕ್ಕುಗಳ ಹನನವಾಗುತ್ತದೆ ಎನ್ನುವುದು ಅದಕ್ಕೆ ಕಾರಣವಾಗಿದೆ. ನೋಂದಣಿ ಮತ್ತು ಲೈಸನ್ಸ್‌ಗೆ ಭಾರೀ ಹೆಚ್ಚಳ ಆಗುವ ಸಾಧ್ಯತೆಯೂ ಇದೆ.
ಈ ಮಸೂದೆಯನ್ನು ಲೋಕಸಭೆ ಶುಕ್ರವಾರ ಚರ್ಚಿಸಿತ್ತು. ಇದು ಪುನಃ ಸೋಮವಾರ ಲೋಕಸಭೆಯಲ್ಲಿ ಚರ್ಚೆಗೆ ಬರಲಿದೆ. ವಾಹಾನ ಸಂಚಾರ ನಿಯಮೋಲ್ಲಂಘನೆಗೆ ಭಾರೀಮೊತ್ತದ ದಂಡವನ್ನು ವಿಧಿಸುವ ಕುರಿತು ಪ್ರಸ್ತಾಪವಿದೆ. ಡ್ರೈವಿಂಗ್ ಲೈಸನ್ಸ್‌ಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಿಕೊಳ್ಳಬಹುದು. ನಿಗದಿತ ಕಾಲಾವಧಿಯ ಬಳಿಕ ತಪಾಸಣೆ ನಡೆಸಿ ಅರ್ಹರಿಗೆ ಮೂರುದಿವಸಗಳೊಳಗೆ ಲೈಸನ್ಸ್ ನೀಡದಿದ್ದರೆ, ಅಧಿಕಾರಿಗಳು ತಪ್ಪಿತಸ್ಥರಾಗುವರು ಇತ್ಯಾದಿ ನಿರ್ದೇಶನಗಳು ಮಸೂದೆಯಲ್ಲಿದೆ.





