ಕೋಮುಗಲಭೆ ಸೃಷ್ಟಿಸಲು ರಿಯಾಝ್ ಮೌಲವಿಯ ಕೊಲೆ: ಪಿಣರಾಯಿ

ಕೊಂಡೊಟ್ಟಿ,ಎ. 8: ಕಾಸರಗೋಡಿನ ಮದ್ರಸ ಅಧ್ಯಾಪಕ ರಿಯಾಝ್ ಮೌಲವಿಯನ್ನು ಕೋಮುಗಲಭೆ ಸೃಷ್ಟಿಸಲಿಕ್ಕಾಗಿ ಕೊಲೆಮಾಡಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮಲಪ್ಪುರಂ ಉಪಚುನಾವಣೆಯಲ್ಲಿಎಲ್‌ಡಿಎಫ್ ಅಭ್ಯರ್ಥಿಯ ಪರ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು.
ಕೇರಳದಲ್ಲಿ ಕೋಮುವಾದಿ ಶಕ್ತಿಗಳು ಗಲಭೆಸೃಷ್ಟಿಸಲು ಯತ್ನಿಸುತ್ತಿವೆ. ಇದರ ಅಂಗವಾಗಿ ಆರೆಸ್ಸೆಸ್ ಆಯೋಜಿಸಿದ ಕೊಲೆಪಾತಕ ಕಾಸರಗೋಡಿನಲ್ಲಿ ನಡೆದಿದೆ. ಪ್ರಕರಣದಲ್ಲಿ ಪೊಲೀಸರು ಬಂಧಿಸಿದವರೆಲ್ಲರು ಆರೆಸ್ಸೆಸ್‌ನ ಮುಖ್ಯ ಕಾರ್ಯಕರ್ತರುಆಗಿದ್ದಾರೆ. ಧರ್ಮಾಧಾರಿತ ದೇಶ ಸ್ಥಾಪಿಸಲಿಕ್ಕೆ ಮೊದಲು ಜಾತ್ಯತೀತತೆ ಪತನಗೊಳ್ಳಬೇಕಿದೆ. ಆದ್ದರಿಂದ ಕೇಂದ್ರಸರಕಾರದ ಸಹಾಯದಿಂದ ಆರೆಸ್ಸೆಸ್ ನಾಯಕತ್ವ ಅದಕ್ಕಾಗಿ ಪ್ರಯತ್ನಿಸುತ್ತಿದೆ. ಅವರು ಗಾಂಧಿಯನ್ನು ಕೊಂದದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.ಜೊತೆ ನೆಹರೂರನ್ನು ಕೊಲ್ಲಬೇಕಿತ್ತು ಎಂದು ಕೂಡಾ ಬಹಿರಂಗವಾಗಿ ಹೇಳುತ್ತಿದ್ದಾರೆ.
ಭಾರತದಲ್ಲಿ ಎಡಪಕ್ಷಗಳು ದೊಡ್ಡ ಶಕ್ತಿಯಲ್ಲ , ಆದರೆ ಸಂಘಪರಿವಾರವನ್ನು ಬಲವಾಗಿ ಎದುರಿಸುತ್ತಿರುವುದು ನಾವು. ಯಾವ ಹಂತದಲ್ಲಿಯೂ ಕೋಮುವಾದವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂದು ಪಿಣರಾಯಿ ಹೇಳಿದ್ದಾರೆ.





