ಅಮೆರಿಕದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಭಾರತದ ಓರ್ವ ಬಲಿ

ವಾಷಿಂಗ್ಟನ್,ಎ.8: ಅಮೆರಿಕದಲ್ಲಿ ಭಾರತೀಯರ ಮೇಲೆ ದಾಳಿ ನಿಂತಿಲ್ಲ. ಮುಸುಕುಧಾರಿಗಳು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಮೂಲದ ವಿಕ್ರಮ್ ಜರ್ಯಾಲ್ ಎಂಬುವವರು ಬಲಿಯಾಗಿದ್ದಾರೆ.
ಪಂಜಾಬ್ ನ ಹಶಿಯಾರ್ಪುರ ಮೂಲದ 28 ವರ್ಷದ ವಿಕ್ರಮ್ ಜರ್ಯಾಲ್ ಎಂಬ ಯುವಕನ ಮೇಲೆ ಗುರುವಾರ ರಾತ್ರಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.
ದುಷ್ಕರ್ಮಿಗಳು ವಿಕ್ರಮ್ ಜರ್ಯಾಲ್ ರನ್ನು ಬೆದರಿಸಿ ಗ್ಯಾಸ್ ಬಂಕ್ ನಲ್ಲಿದ್ದ ಹಣವನ್ನು ದರೋಡೆ ಮಾಡಿದ್ದಾರೆ. ಅನಂತರ ವಿಕ್ರಮ್ ಜರ್ಯಾಲ್ ಎದೆಗೆ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ವಿಕ್ರಮ್ ಸ್ಥಳದಲ್ಲೇ ಸಾವನ್ನಪ್ಪಿದರು.
ವಾಷಿಂಗ್ಟನ್ ಸಮೀಪದ ಯಾಕಿಮಾ ನಗರದಲ್ಲಿ ಕುಟುಂಬದ ಸ್ನೇಹಿತರೊಬ್ಬರ ಎಎಂ-ಪಿಎಂ ಗ್ಯಾಸ್ ಬಂಕ್ ವೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ವಿಕ್ರಮ್ ಜರ್ಯಾಲ್ ಕೇವಲ 25 ದಿನಗಳ ಹಿಂದೆಯಷ್ಟೇ ಅಮೆರಿಕಕ್ಕೆ ತೆರಳಿದ್ದರು.
Next Story





