ಮಕ್ಕಳ ವಿರುದ್ಧ ಲೈಂಗಿಕ ಕಿರುಕುಳ: ಒಂದೇ ವರ್ಷದಲ್ಲಿ ಬಂದ ಆನ್ ಲೈನ್ ದೂರುಗಳು ಎಷ್ಟು ಗೊತ್ತೇ ?

ಹೊಸದಿಲ್ಲಿ, ಎ.8: ಮಕ್ಕಳ ವಿರುದ್ಧ ಲೈಂಗಿಕ ಕಿರುಕುಳದ ಕುರಿತು ದೂರು ನೀಡಲು ಇರಿಸಲಾದ ಆನ್‌ಲೈನ್ ದೂರು ಪೆಟ್ಟಿಗೆಯಲ್ಲಿ ಒಂದು ವರ್ಷದೊಳಗೆ 287 ದೂರುಗಳು ಬಂದಿವೆ. ಇವುಗಳಲ್ಲಿ 25 ಪೊಕ್ಸೊ ವ್ಯಾಪ್ತಿಗೆ ಬರುವ ಅಪರಾಧ ಕೃತ್ಯವಾಗಿದೆ. ಮಹಿಳಾ-ಶಿಶುಕಲ್ಯಾಣ ಇಲಾಖೆ ಸಹಾಯಸಚಿವ ಕೃಷ್ಣರಾಜ್ ಲೋಕಸಭೆಗೆ ತಿಳಿಸಿದ್ದಾರೆ.
ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗದ ಸದಸ್ಯನ ಮೇಲ್ನೋಟದಲ್ಲಿ ಇಬಾಕ್ಸ್ ಕಾರ್ಯಾಚರಿಸುತ್ತಿದೆ. ಮಕ್ಕಳ ವಿರುದ್ಧ ಅಕ್ರಮದ ಹೆಚ್ಚಳವಾಗುತ್ತಿದೆ. ಅವುಗಳಲ್ಲಿ ಕೆಲವಷ್ಟೇ ಬಹಿರಂಗವಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಮಕ್ಕಳಲ್ಲಿ ಶೇ. 53ರಷ್ಟು ಮಕ್ಕಳು ತಮಗಾದ ಕಿರುಕುಳಗಳನ್ನು ವಿವರಿಸಿದ್ದಾರೆ.
ಹೆಚ್ಚಿನ ಘಟನೆಗಳಲ್ಲಿ ಆರೋಪಿಯ ಕುಟುಂಬ ಸದಸ್ಯರು ಅಥವಾ ನಿಕಟ ಸಂಬಂಧಿಕರು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ತಮಗಾದ ಕಿರುಕುಳಗಳನ್ನು ಬಹಿರಂಗಪಡಿಸಲು ಮಕ್ಕಳು ಹೆದರುತ್ತಾರೆ. ಕಿರುಕುಳಕ್ಕೊಳಗಾದ ಮಕ್ಕಳು ಮಾನಸಿಕ ಆಘಾತಕ್ಕೊಳಗಾಗುತ್ತಾರೆ ಎಂದು ಹೆಚ್ಚಿನ ಅಧ್ಯಯನಗಳಲ್ಲಿ ಬಹಿರಂಗಗೊಂಡಿವೆ.