ಮಹಾರಾಷ್ಟ್ರದಲ್ಲಿ ಮತಾಂತರ ತಡೆಗೆ ಹೊಸ ಕಾನೂನು ಬರುತ್ತಿದೆ !

ಮುಂಬೈ,ಎ. 8: ಮಹಾರಾಷ್ಟ್ರದಲ್ಲಿ ಮತಾಂತರ ತಡೆ ಕಾನೂನು ಜಾರಿಗೊಳಿಸಲು ಮಹಾರಾಷ್ಟ್ರ ಸರಕಾರ ಸಿದ್ಧತೆ ನಡೆಸುತ್ತಿದೆ. ಬಡವರನ್ನು ಹಣ, ಜೀವನ ಸೌಕರ್ಯಗಳ ಆಮಿಷ ಒಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ ಎಂದು ಬಿಜೆಪಿ ಶಾಸಕರು ಮಾಡಿದ ಆರೋಪಕ್ಕೆ ಗೃಹಸಚಿವ ದೀಪಕ್ ಕೆ. ಸರ್ಕಾರ್ ಉತ್ತರಿಸುತ್ತಾ ಈವಿಷಯವನ್ನು ವಿಧಾನಸಭೆಗೆ ತಿಳಿಸಿದ್ದಾರೆ.
ಈಗ ಭಾರತದ ದಂಡ ಸಂಹಿತೆ ಪ್ರಕಾರ ಬಲವಂತದ ಮತಾಂತರ ವಿರುದ್ಧ ಕೇಸು ದಾಖಲಿಸಲಾಗುತ್ತಿದೆ. ಕಳೆದ ವರ್ಷ ಅಷ್ಟೇನೂ ಮತಾಂತರ ಪ್ರಕರಣಗಳು ವರದಿಯಾಗಿದಲ್ಲ ಎಂದು ಸಚಿವರು ವಿಧಾನಸಭೆಗೆ ತಿಳಿಸಿದರು. ಸಂಬಂಧಿಸಿದವರೊಂದಿಗೆ ಚರ್ಚಿಸಿ ಕರಡು ಮಸೂದೆ ರೂಪಿಸಲಾಗುವುದು ಎಂದು ವಿವರಿಸಿದರು.
ಪತ್ರಕರ್ತರ ವಿರುದ್ಧ ದಾಳಿ ತಡೆ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಇಂದಿನ ದಿನ ಪಾಸು ಮಾಡಿದೆ. ಈ ಮಸೂದೆಗೆ ಸಚಿವ ಸಂಪುಟ ರೂಪು ನೀಡಿತ್ತು. ಒಂದು ವಾರದ ಹಿಂದೆ ನವಿ ಮುಂಬೈಯಲ್ಲಿ ಹಿರಿಯ ಪತ್ರಕರ್ತರೊಬ್ಬರ ಮೇಲೆ ನಡೆದಿದ್ದ ಹಲ್ಲೆಯನ್ನು ವಿರೋಧಿಸಿ ಭಾರೀ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕಾನೂನು ರೂಪಿಸಲಾಗಿದೆ.