ಮಧ್ಯಪ್ರದೇಶದಲ್ಲಿ 5 ರೂ.ಗೆ ಊಟ ಅರಂಭ !

ಭೋಪಾಲ, ಎ. 8: ದೀನದಯಾಳ್ ರಸೋಯಿ ಯೋಜನೆಯ ಅಡಿಯಲ್ಲಿ ಮಧ್ಯಪ್ರದೇಶದ 49 ಜಿಲ್ಲೆಗಳಲ್ಲಿ ಐದು ರೂಪಾಯಿಗೆ ಊಟ ನೀಡುವ ಯೋಜನೆ ಆರಂಭಗೊಂಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗ್ವಾಲಿಯರ್‌ನಲ್ಲಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ರಾಜ್ಯದ 49 ಜಿಲ್ಲೆಗಳಲ್ಲಿ ಸಂಜೆ ಆರು ಗಂಟೆಯಿಂದ ಏಳು ಗಂಟೆವರೆಗೆ ಐದು ರೂಪಾಯಿ ಊಟ ವಿತರಣೆ ಆರಂಭಿಸಲಾಗಿದೆ ಎಂದು ಗ್ರಾಮಾಭಿವೃದ್ಧಿ ಇಲಾಖೆ ಸಚಿವೆ ಮಾಯಾಸಿಂಗ್ ಹೇಳಿದ್ದಾರೆ.
ಎಪ್ರಿಲ್ ಒಂಬತ್ತಕ್ಕೆ ನಡೆಯುತ್ತಿರುವ ಉಪಚುನಾವಣೆ ಬಳಿಕ ಯೋಜನೆಯನ್ನು ಇನ್ನೂ ಎರಡು ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರತಿಯೊಂದೂ ಜಿಲ್ಲೆಯ ಒಂದು ಸ್ಥಳದಲ್ಲಾದರೂ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಸಿಂಗ್ ತಿಳಿಸಿದರು. ಅಗತ್ಯಕ್ಕೆ ತಕ್ಕಂತೆ ಇನ್ನೂ ಹೆಚ್ಚಿನ ಆಹಾರ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ.
Next Story





