ಆಕ್ಸಿಸ್ ಬ್ಯಾಂಕ್ ಅಧಿಕಾರಿ ಗಳ ಸಹಿತ 12 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ

ಹೊಸದಿಲ್ಲಿ,ಎ.8: ನೋಟು ಅಮಾನ್ಯಗೊಳಿಸಿದ ಬೆನ್ನಿಗೆ ಆಕ್ಸಿಸ್ ಬ್ಯಾಂಕಿನಲ್ಲಿ ಹಳೆಯ ನೋಟು ಉಪಯೋಗಿಸಿ 100 ಕೋಟಿ ರೂಪಾಯಿ ವರೆಗಿನ ವ್ಯವಹಾರವನ್ನು ನಡೆಸಿದ ಹನ್ನೆರಡು ಮಂದಿ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿದೆ. ಈ ಪ್ರಯುಕ್ತ ಅಹ್ಮದಾಬಾದ್‌ನಲ್ಲಿ ಹದಿನಾರು ಕಡೆಗಳಲ್ಲಿ ಸಿಬಿಐ ತನಿಖೆ ನಡೆಸಿದೆ.
ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪ್ರಕರಣದಾಖಲಿಸಿರುವ ಸಿಬಿಐ ಅವರು ಅನಧಿಕೃತವಾಗಿ ಹಣ ಬದಲಾಯಿಸಲು ನೆರವಾಗಿದ್ದಾರೆಂದು ಆರೋಪವನ್ನು ಹೊರಿಸಿದೆ. ಶೆಲ್ ಕಂಪೆನಿಯ ಖಾತೆಗಳ ಮೂಲಕ ಭಾರೀ ಮೊತ್ತವನ್ನು ಕಳೆದ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಬದಲಾಯಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳ ವಿರುದ್ಧ ಅರೋಪವನ್ನು ಹೊರಿಸಿದೆ. ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಬ್ಯಾಂಕ್‌ಗಳು ಪಾಲಿಸಬೇಕಿದ್ದ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ. ಕಪ್ಪುಹಣವನ್ನು ಬಿಳಿಮಾಡಲು ಅಧಿಕಾರಿಗಳು ನೆರವಾಗಿದ್ದಾರೆಂದು ಸಿಬಿಐ ಹೇಳಿದೆ.
Next Story





