ಎ.11-12: ಪಂಜರಕೋಡಿಯಲ್ಲಿ ಕಥಾಪ್ರಸಂಗ
ಸಾಲೆತ್ತೂರು, ಎ.8: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್‌ನ ಮಿತ್ತರಾಜೆ ಶಾಖೆಯ ಐದನೆ ವಾರ್ಷಿಕ ಪ್ರಯುಕ್ತ ಎ.11 ಮತ್ತು 12ರಂದು ಪಂಜರಕೋಡಿ ಜುಮಾ ಮಸೀದಿ ವಠಾರದಲ್ಲಿ ತಾಜುಲ್ ಉಲಮಾ, ನೂರುಲ್ ಉಲಮಾ ಮತ್ತು ಅಗಲಿದ ಸುನ್ನೀ ಉಲಮಾ ನಾಯಕರ ಅನುಸ್ಮರಣೆ ಹಾಗೂ ಕಥಾ ಪ್ರಸಂಗ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಿ.ಎಂ.ಎ. ಕುಂಞಿ ಮದನಿ ಅಡೂರ್, ಆದಂ ಮದನಿ ಆತೂರು ಮತ್ತು ಸಂಗಡಿಗರು ನಿರ್ವಹಿಸುವ ಕಥಾ ಪ್ರಸಂಗವು ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ ಎಂದು ಮಿತ್ತರಾಜೆ ಎಸ್ಸೆಸ್ಸೆಫ್ ಶಾಖಾಧ್ಯಕ್ಷ ಅಬ್ದುಲ್ ಹಮೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





