ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ತಾರತಮ್ಯ : ಮುರುಗದಾಸ್

ಮುಂಬೈ,ಎ.8: ಈ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ತಾರತಮ್ಯದಿಂದ ಕೂಡಿವೆ ಮತ್ತು ಆಯ್ಕೆ ಸಮಿತಿಯಲ್ಲಿನ ಕೆಲವರು ಪಕ್ಷಪಾತ ಪ್ರದರ್ಶಿಸಿದ್ದಾರೆ ಎಂದು ಚಿತ್ರನಿರ್ಮಾಪಕ ಎ.ಆರ್.ಮುರುಗದಾಸ್ ಅವರು ಟ್ವೀಟಿಸಿದ್ದಾರೆ.
ಅಕ್ಷಯ ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಪ್ರಶಸ್ತಿಗಳು ಪ್ರಕಟಗೊಂಡ ಬಳಿಕ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಿದ್ದಾರೆ.
ಆಯ್ಕೆ ಸಮಿತಿಯ ಅಧ್ಯಕ್ಷ ಪ್ರಿಯದರ್ಶನ ಅವರೊಂದಿಗೆ ನಿಕಟವಾಗಿರುವುದು ಅಕ್ಷಯ ಕುಮಾರ್ ಪ್ರಶಸ್ತಿ ಗೆಲ್ಲಲು ಕಾರಣ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ.
Next Story