ಕಣಿವೆಗೆ ಉರುಳಿದ ಮಿನಿಬಸ್ 16 ಮಂದಿಗೆ ಗಾಯ

ಹೊಸದಿಲ್ಲಿ, ಎ.8: ಹಿಮಾಚಲಪ್ರದೇಶದ ಸಮೀಪದ ಮಂಡಿ ಎಂಬಲ್ಲಿ ಮಿನಿ ಬಸ್ಸೊಂದು ಕಣಿವೆಗೆ ಉರುಳಿದ ಕಾರಣ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 16 ಮಂದಿ ಗಾಯಗೊಂಡಿದ್ದಾರೆ. ಇವರು ಕೇರಳದ ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿಗಳು.
ಹಿಮಾಚಲಪ್ರದೇಶದ ಕುಲ್ಲು ಗ್ರಾಮಕ್ಕೆ ಭೇಟಿ ಮಾಡಲು ಮಿನಿ ಬಸ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿಬಿದ್ದಿದೆ. ಗಾಯಾಳುಗಳಲ್ಲಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
Next Story





