ಜಾಧವ್ ಅರ್ಧಶತಕ; ಆರ್‌ಸಿಬಿ 157/8

ಬೆಂಗಳೂರು, ಎ.8: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ ಭರ್ಜರಿ ಬ್ಯಾಟಿಂಗ್ ನೆರವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ ಐದನೆ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ನಿಗದಿತ 20ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಿದೆ.
8.4 ಓವರ್‌ಗಳಲ್ಲಿ 55 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿ ತಂಡವನ್ನು ಜಾಧವ್ ಮತ್ತು ಸ್ಟುವರ್ಟ್ ಬಿನ್ನಿ ಆಧರಿಸಿದರು.
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭ ಚೆನ್ನಾಗಿರಲಿಲ್ಲ. ಸ್ಫೋಟಕ ಆರಂಭಿಕ ದಾಂಡಿಗ ಕ್ರಿಸ್ ಗೇಲ್ 6 ರನ್, ನಾಯಕ ಶೇನ್ ವ್ಯಾಟ್ಸನ್ 24 ರನ್, ಮನ್‌ದೀಪ್ ಸಿಂಗ್ 12 ರನ್ ಗಳಿಸಿ ಔಟಾದರು.
ನಾಲ್ಕನೆ ವಿಕೆಟ್‌ಗೆ ಜಾಧವ್ ಮತ್ತು ಬಿನ್ನಿ 6.2 ಓವರ್‌ಗಳಲ್ಲಿ 10.42 ಸರಾಸರಿಯಂತೆ 66 ರನ್ ಸೇರಿಸಿದರು.ಜಾಧವ್ 69 ರನ್(37ಎ, 5ಬೌ,5ಸಿ) ಮತ್ತು ಬಿನ್ನಿ 16 ರನ್ ಗಳಿಸಿ ಝಹೀರ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. 15 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 121 ರನ್ ಮಾಡಿದ್ದ ಆರ್‌ಸಿಬಿ ಮತ್ತೆ ಕುಸಿತದ ಹಾದಿ ಹಿಡಿಯಿತು.
ವಿಷ್ಣು ವಿನೋಧ್ 9ರನ್, ಪವನ್ ನೇಗಿ 10 ರನ್ ಗಳಿಸಿ ಔಟಾದರು. ಇಕ್ಬಾಲ್ ಅಬ್ದುಲ್ಲ ಔಟಾಗದೆ 5 ರನ್ ಗಳಿಸಿದರು.
ಕ್ರಿಸ್ ಮೊರಿಸ್ 21ಕ್ಕೆ 3, ಝಹೀರ್ ಖಾನ್ 31ಕ್ಕೆ 2, ಪ್ಯಾಟ್ ಕಮಿನ್ಸ್ 29ಕ್ಕೆ 1 ಮತ್ತು ನದೀಮ್ 13ಕ್ಕೆ 1 ವಿಕೆಟ್ ಪಡೆದರು
. ,,,,,,,,,,,





