ಬಜ್ಪೆ: ಹಿಫ್ಲುಲ್ ಕುರ್‌ಆನ್ ಕಾಲೇಜು ಪ್ರವೇಶಾತಿ ಆರಂಭ

ಮಂಗಳೂರು, ಎ.8: ಬಜ್ಪೆಯ ಮುಹಿಯುದ್ದೀನ್ ಜಮಾ ಮಸೀದಿ ಅಧೀನದ ಹಿಫ್ಲುಲ್ ಕುರ್‌ಆನ್ ಕಾಲೇಜಿಗೆ 5 ಮತ್ತು 6ನೆ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ 2017-18ನೆ ಶೈಕ್ಷಣಿಕ ವರ್ಷದಿಂದ ಹಿಫ್ಲುಲ್ ಕುರ್‌ಆನ್ ತರಗತಿಯು ಆರಂಭವಾಗಲಿದೆ.
ಈ ಸಂಬಂಧ ಎ.18ರಂದು ಬೆಳಗ್ಗೆ 10 ಗಂಟೆಗೆ ಬಜ್ಪೆಯ ಈದ್ಗಾ ಮಸೀದಿ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಪ್ರತಿಭಾವಂತ ಬಡ ಹಾಗೂ ಯತೀಂ ಮಕ್ಕಳಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ವಿದ್ಯಾರ್ಥಿಗಳು ಮಸೀದಿಯಲ್ಲಿದ್ದುಕೊಂಡು ದೀನಿ ವಿದ್ಯಾಭ್ಯಾಸದ ಜೊತೆಗೆ ಊಟೋಪಚಾರದ ವ್ಯವಸ್ಥೆಯನ್ನು ವಿದ್ಯಾಕೇಂದ್ರದಲ್ಲಿದೆ. ಅಲ್ಲಿಂದಲೇ ಅವರನ್ನು ವಾಹನ ಮೂಲಕ ಶಾಲೆಗೆ ಕಳುಹಿಸಲಾಗುವುದು. ಎ.9ರಿಂದ ಅರ್ಜಿಗಳನ್ನು ಪಡೆದು ಎ.15ರೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಕಚೇರಿಗೆ ತಲುಪಿಸಬೇಕು. ವಿದ್ಯಾರ್ಥಿಯ ಎರಡು ಭಾವಚಿತ್ರ, ತಂದೆಯ ಒಂದು ಭಾವಚಿತ್ರ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು ಎಂದು ಪ್ರಕಟನೆ ತಿಳಿಸಿದೆ.
Next Story





