ಕ್ಯಾನ್ಸರ್ ವಿರುದ್ಧದ ಹೊಸ ಔಷಧಿ ಭಾರತಕ್ಕೆ ಇನ್ನೂ ಮರೀಚಿಕೆ

ಹೊಸದಿಲ್ಲಿ, ಎ.9: ವಿಶ್ವಾದ್ಯಂತ ಕ್ಯಾನ್ಸರ್ ರೋಗದ ವಿರುದ್ಧ ಕ್ರಾಂತಿಕಾರಿ ಸಂಶೋಧನೆಗಳು ನಡೆಯುತ್ತಿದ್ದರೂ, ಭಾರತ ಸೇರಿದಂತೆ ಅಭಿವೃದ್ಧಿಶೀಲ ದೇಶಗಳು ಮಾತ್ರ ಇದರ ವಿರುದ್ಧದ ಹೊಸ ಔಷಧಿಗಳನ್ನು ದೇಶಗಳಲ್ಲಿ ಪರಿಚಯಿಸುವಲ್ಲಿ ವಿಫಲವಾಗಿವೆ.
2010ರಿಂದ 2014ರ ಅವಧಿಯಲ್ಲಿ 50ಕ್ಕೂ ಹೆಚ್ಚು ಕ್ಯಾನ್ಸರ್ ಔಷಧಿಗಳು ವಿಶ್ವಾದ್ಯಂತ ಶೋಧವಾಗಿದ್ದರೂ, ಕೇವಲ ಏಳು ಹೊಸ ಕ್ಯಾನ್ಸರ್ ಔಷಧಿಗಳನ್ನಷ್ಟೇ ಭಾರತದಲ್ಲಿ ಪರಿಚಯಿಸಲಾಗಿದೆ. ದೇಶದಲ್ಲಿ ಒಂದು ಕೋಟಿಗೂ ಅಧಿಕ ಕ್ಯಾನ್ಸರ್ ರೋಗಿಗಳಿದ್ದರೂ, ಔಷಧಗಳ ಲಭ್ಯತೆ ವಿಚಾರದಲ್ಲಿ 2006-16ರ ದಶಕದಲ್ಲಿ ಭಾರತೀಯರಿಗೆ ಮರೀಚಿಕೆಯಾಗಿಯೇ ಉಳಿದಿದೆ ಎನ್ನುವುದು ಕ್ವಿಂಟಿಲೆಸ್ ಐಎಂಎಸ್ ಎಂಬ ಸಂಸ್ಥೆಯ ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ ಸ್ಪಷ್ಟವಾಗಿ ತಿಳಿಯುತ್ತದೆ.
ಒಂದೆಡೆ ಕ್ಯಾನ್ಸರ್ ಚಿಕಿತ್ಸೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಸುಧಾರಣೆಗಳಾಗುತ್ತಿದ್ದರೂ, ಹಲವಾರು ರೋಗಿಗಳು ಚಿಕಿತ್ಸೆ ಇಲ್ಲದೇ ಸಾಯುತ್ತಿದ್ದಾರೆ. ಇಷ್ಟಾಗಿಯೂ ಬದಲಾವಣೆ ಅಳವಡಿಸಿಕೊಳ್ಳಲು ಭಾರತ ವಿಫಲವಾಗಿದೆ.
Next Story





