ಜೊತೆ ನಿಂತು ಫೋಟೊ ತೆಗೆಸಲು ನಿರಾಕರಿಸಿದ ರಜನಿ: ಅಭಿಮಾನಿಗಳಿಗೆ ಅತೃಪ್ತಿ

ಚೆನ್ನೈ, ಎ.9: ರಜನೀಕಾಂತ್ ರಾಜಕೀಯಪ್ರವೇಶದ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿದೆ ಎನ್ನಲಾದ ಕಾರ್ಯಕ್ರಮದಲ್ಲಿ ಅಭಿಮಾನಿಗಳೊಂದಿಗೆ ನಿಂತು ಫೋಟೊ ತೆಗೆಸಿಕೊಳ್ಳುವ ಕಾರ್ಯಕ್ರಮದಿಂದ ರಜನಿ ಹಿಂದೆ ಸರಿದಿದ್ದಾರೆ. ಅಷ್ಟೊಂದು ಮಂದಿಯಿರುವಾಗ ಪ್ರತಿಯೊಬ್ಬ ಅಭಿಮಾನಿಯೊಂದಿಗೆ ಫೋಟೊ ತೆಗೆಸಿಕೊಳ್ಳುವುದು ಬಹಳ ಕಷ್ಟದ ವಿಚಾರ ಎಂದು, ರಜನೀಕಾಂತ್ ಫೋಟೊ ಸೆಶನ್‌ನಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. ಎಪ್ರಿಲ್ 12ರಿಂದ ಐದು ದಿವಸಗಳಲ್ಲಿ ರಜನಿಯೊಂದಿಗೆ ಭೇಟಿ, ಫೋಟೊ, ಊಟ ಇತ್ಯಾದಿ ಕಾರ್ಯಕ್ರಮಗಳನ್ನು ಅಭಿಮಾನಿಗಳಿಗೆ ನಿಗದಿಗೊಳಿಸಲಾಗಿತ್ತು. ದಿವಸಕ್ಕೆ 200 ಸಾವಿರ ಮಂದಿಯನ್ನು ಭೇಟಿಯಾಗುವುದೆಂದು ನಿರ್ಧರಿಸಲಾಗಿತ್ತು. ಅವರು ಮೊದಲ ಹಂತದಲ್ಲಿ ನಾಲ್ಕು ಜಿಲ್ಲೆಗಳ ಅಭಿಮಾನಿಗಳೊಂದಿಗೆ ನಿಂತು ಫೋಟೊ ತೆಗೆಸಿಕೊಳ್ಳಬೇಕಿತ್ತು.
ಆದರೆ ಪ್ರತಿದಿವಸ ಇಷ್ಟು ಮಂದಿಯೊಂದಿಗೆ ಫೋಟೊ ತೆಗೆಸಿಕೊಳ್ಳುವುದು ಕಷ್ಟದ ವಿಷಯ, ಆದ್ದರಿಂದ ಇದಕ್ಕೆ ಬದಲಾಗಿ ಗ್ರೂಪ್ ಫೋಟೊ ತೆಗೆಸಿಕೊಳ್ಳಲು ಕಾರ್ಯಕ್ರಮ ಆಯೋಜಕರು ನಿಶ್ಚಯಿಸಿದಾಗ ಅದಕ್ಕೆ ಒಪ್ಪದೆ ಅಭಿಮಾನಿಗಳು ಅತೃಪ್ತಿ ಪ್ರಕಟಿಸಿದ್ದಾರೆ. ಅಂತಿಮವಾಗಿ ಫೋಟೊ ಕಾರ್ಯಕ್ರಮದಿಂದಲೇ ದೂರಸರಿದಿದ್ದಾರೆ. ರಜನಿ ಈ ಫೋಟೊ ಕಾರ್ಯಕ್ರಮ ಅವರ ರಾಜಕೀಯ ಪ್ರವೇಶಕ್ಕೆ ಮುನ್ನುಡಿಯೆಂದು ತಮಿಳ್ನಾಡಿನಾದ್ಯಂತ ಚರ್ಚೆ ನಡೆಯುತ್ತಿದೆ.
ಪ್ರತಿಯೊಬ್ಬರ ಬೇಡಿಕೆಯೂ ನ್ಯಾಯವಾದದ್ದು. ಆದರೆ, ಈಗ ಫೋಟೊ ತೆಗೆಸಿಕೊಳ್ಳಲು ಕಷ್ಟವಿದೆ ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳಿಗೆ ರಜನಿ ಅಭಿಮಾನಿಗಳನ್ನು ಸಮಧಾನಪಡಿಸಿದ್ದಾರೆ. ಆದಷ್ಟು ಬೇಗನೆ ಜಿಲ್ಲಾ ಮಟ್ಟದಲ್ಲಿ ನಾವೆಲ್ಲ ಒಟ್ಟಿಗೆ ಸೇರೋಣ ಎಂದು ಅಭಿಮಾನಿಗಳಿಗೆ ಅವರು ತಿಳಿಸಿದ್ದಾರೆ. ಆರ್‌ಕೆನಗರ್ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಗಂಗೈಅಮರನ್ ಸೂಪರ್‌ಸ್ಟಾರ್ ರಜನೀ ಕಾಂತ್ ತನಗೆ ಬೆಂಬಲ ಸೂಚಿಸಿದ್ದಾರೆಂದು ಹೇಳಿಕೊಂಡಿದ್ದರು. ಅದನ್ನು ರಜನಿ ನಿರಾಕರಿಸಿದ್ದಾರೆ.







