ಖುರೇಷಿ ಮೇಲಿನ ಪೊಲೀಸ್ ದೌರ್ಜನ್ಯ ಖಂಡನೀಯ: ಇಬ್ರಾಹೀಂ ಸಅದಿ
ಕೆ.ಸಿ.ಎಫ್. ಅಲ್ ಹಸ್ಸಾ ಸೆಕ್ಟರ್‌ನ ವಾರ್ಷಿಕ ಮಹಾಸಭೆ

ಸೌದಿ ಅರೇಬಿಯ, ಎ.9: ಮಂಗಳೂರಿನ ಸಿಸಿಬಿ ಪೊಲೀಸರು ಕಾಟಿಪಳ್ಳದ ಅಹ್ಮದ್ ಖುರೇಷಿಯವರ ಮೇಲಿ ನಡೆಸಿರುವ ದೌರ್ಜನ್ಯ ಖಂಡನೀಯ. ಭಾರತ ಸೇರಿದಂತೆ ಎಲ್ಲೆಡೆ ಮುಸ್ಲಿಮರ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಅಮಾಯಕರಿಗಾಗುವ ಅನ್ಯಾಯವನ್ನು ನಾವೆಲ್ಲ ಒಗ್ಗಟ್ಟಾಗಿ ವಿರೋಧಿಸಬೇಕು ಎಂದು ಇಬ್ರಾಹಿಂ ಸಅದಿ ಕರೆ ನೀಡಿದ್ದಾರೆ.
ಇತ್ತೀಚೆಗೆ ಅಲ್ ಹಸ್ಸಾದ ಹೊಟೇಲ್ ಫುಡ್ ಪ್ಯಾಲೇಸ್‌ನಲ್ಲಿ ನಡೆದ ಕೆ.ಸಿ.ಎಫ್. ಅಲ್ ಹಸ್ಸಾ ಸೆಕ್ಟರ್ ನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಸಿ.ಎಫ್. ಅಲ್ ಹಸ್ಸಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಉಳ್ಳಾಲ ವಹಿಸಿದ್ದರು.
ವೇದಿಕೆಯಲ್ಲಿ ಕೆ.ಸಿ.ಎಫ್. ದಮ್ಮಾಮ್ ಝೋನಲ್ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ ಹಾಗೂ ಕೆ.ಸಿ.ಎಫ್. ರಾಷ್ಟ್ರೀಯ ಪಿಆರ್ ವಿಂಗ್ ಕಾರ್ಯದರ್ಶಿ ಅಶ್ರು ಬಜ್ಪೆಉಪಸ್ಥಿತರಿದ್ದರು.
ಚುಣಾವಣಾಧಿಕಾರಿಯಾಗಿ ಆಗಮಿಸಿದ ಅದ್ನಾನ್ ಪುಲಾಬೆ, ಇಕ್ಬಾಲ್ ಕೈರಂಗಳ ಅವರ ನೇತೃತ್ವದಲ್ಲಿ ಕೆ.ಸಿ.ಎಫ್. ಅಲ್ ಹಸ್ಸಾ ಸೆಕ್ಟರ್‌ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಹಾರಿಸ್ ಕಾಜೂರು
ಪ್ರಧಾನ ಕಾರ್ಯದರ್ಶಿ: ಇಸ್ಹಾಕ್ ಫಜೀರ್
ಖಜಾಂಚಿ: ಅಬ್ದುಲ್ ರಹ್ಮಾನ್ ಕೈರಂಗಳ
ಶಿಕ್ಷಣ ವಿಭಾಗದ ಅಧ್ಯಕ್ಷ: ಹಬೀಬ್ ಮರ್ದಾಳ ಕಾರ್ಯದರ್ಶಿ: ಅಶ್ರಫ್ ಕಟ್ಟದಪಡ್ಪು
ಅಡ್ಮಿನ್ ವಿಂಗ್ ಅಧ್ಯಕ್ಷ: ಇಕ್ಬಾಲ್ ಗುಲ್ವಾಡಿ
ಕಾರ್ಯದರ್ಶಿ: ಸಂಶುದ್ದೀನ್ ಕೆಮ್ಮಾರ
ಪಬ್ಲಿಷಿಂಗ್ ವಿಂಗ್ ಅಧ್ಯಕ್ಷ: ಶರೀಫ್ ಉಳ್ತೂರು
ಕಾರ್ಯದರ್ಶಿ: ಝಕರಿಯಾ ಸಅದಿ ಸಾಂತ್ವನ ವಿಭಾಗದ ಅಧ್ಯಕ್ಷ: ಮುಝೈರ್ ಅಡ್ಡೂರು
ಕಾರ್ಯದಶಿ: ಇಬ್ರಾಹೀಂ ಕಾಜೂರು ಆರ್ಗನೈಸರ್ ವಿಂಗ್ ಅಧ್ಯಕ್ಷ: ಅಶ್ಕತ್ ಉಳ್ಳಾಲ
ಕಾರ್ಯದರ್ಶಿ: ಹಕೀಂ ನೆಕ್ಕರೆ
ದಮ್ಮಾಮ್ ಝೋನಲ್ ಪ್ರತಿನಿಧಿಯಾಗಿ ಅಶ್ರು ಬಜ್ಪೆ,ಇಕ್ಬಲ್ ಗುಲ್ವಾಡಿ ಆಯ್ಕೆಯಾದರು.
ಸಭೆಯನ್ನುದ್ದೇಶಿಸಿ ಕೆ.ಸಿ.ಎಫ್. ದಮ್ಮಾಮ್ ಝೋನಲ್ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ, ದಮ್ಮಾಮ್ ವಲಯದ ನಾಯಕ ಇಕ್ಬಾಲ್ ಕೈರಂಗಳ ಮಾತನಾಡಿದರು.
ಕೆ.ಸಿ.ಎಫ್. ಅಲ್ ಹಸ್ಸಾ ಸೆಕ್ಟರ್ ನ ಮಾಜಿ ಅಧ್ಯಕ್ಷ ಅಶ್ರಫ್ ಉಳ್ಳಾಲರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕೆ.ಸಿ.ಎಫ್. ಗೋಲ್ಡ್ ಸೂಕ್ ಯುನಿಟ್ ಅಧ್ಯಕ್ಷ ಅಬ್ದುಲ್ಲಾ ಕನ್ನಂಗಾರ್, ಗಸರಿಯ್ಯ್ ಯುನಿಟ್ ಅಧ್ಯಕ್ಷ ನಝೀರ್ ಪುತ್ತೂರು, ಮುಬರ್ರಝ್ ಯುನಿಟ್ ಅಧ್ಯಕ್ಷ ಅಸಾದುಲ್ಲಾ ಹಾಗೂ ಫಾರೂಕ್ ಸಅದಿ, ಹಕೀಂ ಝುಹ್ರಿ, ದಮ್ಮಾಮ್ ವಲಯ ನಾಯಕ ಬಾಷಾ ಗಂಗಾವಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಝಕರಿಯ್ಯ ಸಅದಿ ದುಆ ನೆರವೇರಿಸಿದರು. ಹಬೀಬ್ ಮರ್ದಾಳ ಕಿರಾಅತ್ ಪಠಿಸಿದರು. ಇಕ್ಬಾಲ್ ಗುಲ್ವಾಡಿ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಇಸ್ಹಾಕ್ ಫಜೀರ್ ವಂದಿಸಿದರು.







