ಕಂಬಳ ನಿಷೇಧ ರದ್ದು ವಿಚಾರ: ರಾಜ್ಯ ಸರಕಾರವನ್ನು ಅಭಿನಂದಿಸಿದ ಡಿ.ವಿ. ಸದಾನಂದಗೌಡ

ಮಂಗಳೂರು, ಎ.9: ಕಂಬಳ ನಿಷೇಧ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಕಾರ್ಯವನ್ನು ನಾನು ಅಭಿನಂದಿಸುತ್ತೇನೆ. ಕಂಬಳ ನಿಷೇಧ ರದ್ದತಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಶೀಘ್ರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಮಂಗಳೂರಿಗೆ ಆಗಮಿಸಿದ್ದ ಅವರು, ಪತ್ರಕರ್ತರೊಂದಿಗೆ ಮಾತನಾಡಿ, ಕೇಂದ್ರದಲ್ಲೂ ನ್ಯಾಯಾಂಗ, ಶಾಸಕಾಂಗ, ಪರಿಸರ ಇಲಾಖೆಯ ಅನುಮತಿ ಬೇಕಾಗುತ್ತದೆ. ಅಲ್ಲಿಂದ ವರದಿ ಬಂದ ಬಳಿಕ ಅದನ್ನು ಕಾನೂನು ಮತ್ತು ಗೃಹ ಇಲಾಖೆಗೆ ಕಳುಹಿಸಬೇಕಾಗಿದೆ. ರಾಜ್ಯ ಸರಕಾರ ಕಳುಹಿಸಿದ್ದ ಮಸೂದೆಯಲ್ಲಿ ಪ್ರಾಣಿಹಿಂಸೆ ಇಲ್ಲ ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ. ಅದನ್ನು ಕೇಂದ್ರದಲ್ಲಿ ಸರಿಪಡಿಸಲಾಗುವುದು. ಒಂದು ವಾರದಲ್ಲಿ ರಾಷ್ಟ್ರಪತಿಗಳಿಗೆ ಈ ವರದಿ ಕಳುಹಿಸಲಾಗುವುದು ಎಂದರು.
Next Story





