ಟಿಸಿ ವೆಲ್ಫೇರ್ ಫೌಂಡೇಶನ್‌ನಿಂದ ಸಾಮೂಹಿಕ ವಿವಾಹ

ಮಂಗಳೂರು, ಎ.9: ಟಿ.ಸಿ. ವೆಲ್ಫೇರ್ ಫೌಂಡೇಶನ್ ವತಿಯಿಂದ 3 ಜೋಡಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ರವಿವಾರ ನಗರದ ಬಂದರ್ ಬೀಬಿ ಅಲಾಬಿ ರಸ್ತೆಯ ಸಭಾಂಗಣದಲ್ಲಿ ನಡೆಯಿತು.
ಉದ್ಯಮಿ, ಫಿಝಾ ಗ್ರೂಪ್‌ನ ಆಡಳಿತ ನಿರ್ದೇಶಕ ಬಿ.ಎಂ. ಫಾರೂಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ಕಾರ್ಯಕ್ರಮ ಉದ್ಘಾಟಿಸಿದರು. ಮಾರಿಪಳ್ಳ ಜುಮಾ ಮಸೀದಿಯ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ ದುಆ ನೆರವೇರಿಸಿದರು.
ಝೀನತ್ ಬಕ್ಷ್ ಯತೀಂ ಖಾನಾದ ಕೋಶಾಧಿಕಾರಿ ಹಾಜಿ ಎಸ್.ಎಂ.ರಶೀದ್, ನ್ಯಾಯವಾದಿ ಸಾದಾತ್ ಅನ್ವರ್ ಅತಿಥಿಗಳಾಗಿದ್ದರು.
ವೇದಿಕೆಯಲ್ಲಿ ಟಿಸಿ ವೆಲ್ಫೇರ್ ಫೌಂಡೇಶನ್‌ನ ಅಧ್ಯಕ್ಷ ಬಿ. ಅಬ್ದುಸ್ಸಲಾಂ, ಕೇಂದ್ರ ಜುಮಾ ಮಸೀದಿಯ ಖತೀಬ್ ಸದಕತುಲ್ಲಾ ಫೈಝಿ, ಮಾಜಿ ಮೇಯರ್ ಕೆ.ಅಶ್ರಫ್, ಉದ್ಯಮಿ ಮನ್ಸೂರ್ ಅಹ್ಮದ್, ಕಾರ್ಪೊರೇಟರ್ ಲತೀಫ್ ಕಂದಕ್, ಮಸ್ಜಿದ್ ಝೀನತ್ ಬಕ್ಷ್‌ನ ಟ್ರಸ್ಟಿ ಬಾಷಾ ತಂಙಳ್, ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಿ.ಎಂ. ಅಸ್ಲಂ ಮತ್ತಿತರರು ಉಪಸ್ಥಿತರಿದ್ದರು.
ಫೌಂಡೇಶನ್‌ನ ಉಪಾಧ್ಯಕ್ಷ ಯಹ್ಯಾ ತಂಙಳ್ ಸ್ವಾಗತಿಸಿದರು. ಅಬ್ದುಲ್ ಖಾದರ್ ನಾವೂರು ಕಾರ್ಯಕ್ರಮ ನಿರೂಪಿಸಿದರು.
- ಟಿಸಿ ವೆಲ್ಫೇರ್ ಫೌಂಡೇಶನ್ 9 ವರ್ಷದಿಂದ ಅರ್ಹರನ್ನು ಗುರುತಿಸಿಕೊಂಡು ಸರಳ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದು, ಈವರೆಗೆ 32 ಜೋಡಿಗಳ ವಿವಾಹ ನೆರವೇರಿಸಲಾಗಿದೆ. ರವಿವಾರ ನಡೆದ ಕಾರ್ಯಕ್ರಮದಲ್ಲಿ ವಧುವಿಗೆ 5 ಪವನ್ ಚಿನ್ನ ಮತ್ತು ವರನಿಗೆ ವಾಚ್ ಉಡುಗೊರೆಯಾಗಿ ನೀಡಲಾಯಿತು.







