ಅಜ್ಮೀರ್ ಮೌಲೀದ್ ಮತ್ತು ದಾರುಲ್ ಅಶ್ಅರಿಯ್ಯಾ ಮಹಾಸಭೆ

ಸುರಿಬೈಲ್, ಎ.9: ಸುರಿಬೈಲ್ ದಾರುಲ್ ಅಶ್ಅರಿಯ್ಯಾ ಮಕ್ಕತುಲ್ ಮುಕರ್ರಮಃ ಘಟಕದ ಮಹಾಸಭೆ ಕಾರ್ಯಕ್ರಮ ಹಾಗೂ ಸುಲ್ತಾನುಲ್ ಹಿಂದ್ ಖ್ವಾಜಾ ಮುಈನುದ್ದೀನ್ ಚಿಸ್ತಿರವರ ಮೌಲೀದ್ ಮತ್ತು ಅನುಸ್ಮರಣೆ ಜಬಲನ್ನೂರ್ ಮೂಸಾ ಹಾಜಿ ಕಿನ್ಯರವರ ನಿವಾಸದಲ್ಲಿ ನಡೆಯಿತು.
ದಾರುಲ್ ಅಶ್ಅರಿಯ್ಯಾ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಇದೇ ಸಂದರ್ಭ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಅಬ್ಬಾಸ್ ಹಾಜಿ ಎಲಿಮಲೆ, ಅಧ್ಯಕ್ಷರಾಗಿ ಮೂಸಾ ಹಾಜಿ ಕಿನ್ಯ, ಪ್ರ.ಕಾರ್ಯದರ್ಶಿಯಾಗಿ ಅಶ್ರಫ್ ಮುಸ್ಲಿಯಾರ್ ಪಂಜಲ, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಹಾಜಿ ಉಪ್ಪಿನಂಗಡಿ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಮಜೀದ್ ಉಪ್ಪಿನಂಗಡಿ, ಇರ್ಷಾದ್ ಉಚ್ಚಿಲ, ಬಶೀರ್ ಪೆರ್ಲ, ಜೊತೆ ಕಾರ್ಯದರ್ಶಿಗಳಾಗಿ ಶರೀಫ್ ಮುಸ್ಲಿಯಾರ್ ಕನ್ನಂಗಾರ್, ಇಬ್ರಾಹೀಂ ಉಜಿರೆಬೆಟ್ಟು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಫ್ ಸಖಾಫಿ ಬೊಳ್ಮಾರ್, ಅಬ್ಬಾಸ್ ಹಾಜಿ ಸಾಲ್ಮರ, ಇಕ್ಬಾಲ್ ಕಕ್ಕಿಂಜೆ, ಸುಲೈಮಾನ್ ಪಾದೆಕಲ್ಲು, ಹೈದರ್ ಹಾಜಿ ಪಡೀಲ್, ಮುಸ್ತಫಾ ಉಚ್ಚಿಲ್, ಹಾರಿಸ್ ಕಿನ್ಯ, ಮುಹಮ್ಮದ್ ಸಅದಿ ಪರಪ್ಪು, ಮುಸ್ತಫಾ ಕಿನ್ಯ, ಅಬ್ದುಲ್ ಬಶೀರ್ ಸಾಸ್ತಾನ, ಅಬ್ದುರ್ರಹ್ಮಾನ್ ಸುರತ್ಕಲ್ ಆಯ್ಕೆಯಾದರು.
ಹನೀಫ್ ಸ್ವಾಗತಿಸಿದರು. ಅಶ್ರಫ್ ಮುಸ್ಲಿಯಾರ್ ಪಂಜಲ ವಂದಿಸಿದರು. ಸಂಸ್ಥೆಯ ರಿಯಾದ್ ದಮ್ಮಾಮ್ ಆರ್ಗನೈಝರ್ ಅಬ್ದುಲ್ ಅಝೀಝ್ ಹನೀಫಿ ಕಾಯರ್ ಮೊದಲಾದವರು ಉಪಸ್ಥಿತರಿದ್ದರು





