ಸಾವಿರ ಅಡಿಯ ಪ್ರಪಾತಕ್ಕೆ ಬೀಳದೆ ಬಚಾವಾದ ಬಸ್ ಪ್ರಯಾಣಿಕರು !

ವಯನಾಡ್, ಎ. 9 : ಸಾವಿರ ಅಡಿ ಆಳದ ಪ್ರಪಾತಕ್ಕೆ ಬಸ್ಸೊಂದು ಬೀಳುವುದರಿಂದ ಪವಾಡ ಸದ್ರಶವಾಗಿ ಪಾರಾದ ಶುಭ ಸುದ್ದಿ ಕೇರಳದಲ್ಲಿ ವರದಿಯಾಗಿದೆ.
ಇದರಿಂದ ಬಸ್ ನಲ್ಲಿದ್ದ 18 ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಅಪಾಯದಿಂದ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ.
ಶನಿವಾರ ಮುಂಜಾನೆ ಸುಮಾರು 3 ಗಂಟೆಗೆ ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕ ವಯನಾಡ್ ನಲ್ಲಿ ಬಸ್ ಚಲಾಯಿಸುತ್ತಿರುವಾಗಲೇ ನಿದ್ದೆಗೆ ಜಾರಿದ್ದಾನೆ. ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಜಾರಿದೆ. ಆದರೆ ತಕ್ಷಣ ಎಚ್ಚೆತ್ತ ಚಾಲಕ ಬಸ್ ನಿಯಂತ್ರಿಸಲು ಹೆಣಗಾಡಿದ್ದಾನೆ. ಆಗ ಅದ್ರಷ್ಟವಶಾತ್ ಬಸ್ ರಸ್ತೆ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದು ಅಲ್ಲೇ ನೇತಾಡುತ್ತಾ ನಿಂತು ಬಿಟ್ಟಿದೆ.
ಬಸ್ ಇನ್ನೂ ಒಂದಿಂಚು ಮುಂದೆ ಹೋಗಿದ್ದರೂ ಭಾರೀ ದುರಂತ ಸಂಭವಿಸುತ್ತಿತ್ತು.
Next Story