ತಮಿಳುನಾಡು ಸಚಿವ ವಿಜಯ ಭಾಸ್ಕರ್‌ಗೆ ಆದಾಯ ತೆರಿಗೆ ಇಲಾಖೆಯ ಸಮನ್ಸ್

ಚೆನ್ನೈ,ಎ.9: ತೆರಿಗೆ ವಂಚನೆ ತನಿಖೆಗೆ ಸಂಬಂಧಿಸಿದಂತೆ ಸೋಮವಾರ ಇಲ್ಲಿ ತನ್ನೆದುರು ಹಾಜರಾಗುವಂತೆ ಆದಾಯ ತೆರಿಗೆ ಇಲಾಖೆಯು ತಮಿಳುನಾಡು ಆರೋಗ್ಯ ಸಚಿವ ಸಿ.ವಿಜಯ ಭಾಸ್ಕರ್, ನಟ-ರಾಜಕಾರಣಿ ಆರ್.ಶರತ್ ಕುಮಾರ್ ಮತ್ತು ತಮಿಳುನಾಡು ಡಾ.ಎಂಜಿಆರ್ ವೈದ್ಯಕೀಯ ವಿವಿಯ ಕುಲಪತಿ ಗೀತಾಲಕ್ಷ್ಮಿ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ಎ.7ರಂದು ಸಚಿವರ ಅಧಿಕೃತ ನಿವಾಸ ಮತ್ತು ಆಸ್ತಿಗಳಿಗೆ ಸೇರಿದ ರಾಜ್ಯಾದ್ಯಂತದ 30 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯು ನಡೆಸಿದ್ದ ಶೋಧ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ವಿಜಯ ಭಾಸ್ಕರ ಅವರ ತಂದೆ ಚಿನ್ನತಂಬಿ ಮತ್ತು ಸಂಬಂಧಿಯೋರ್ವ ಶನಿವಾರ ತಿರುಚಿನಾಪಳ್ಳಿಯಲ್ಲಿನ ಆದಾಯ ತೆರಿಗೆ ಕಚೇರಿಗೆ ಹಾಜರಾಗಿದ್ದರು. ಚೆನ್ನೈನಲ್ಲಿನ ಶರತ್‌ಕುಮಾರ್ ನಿವಾಸದ ಮೇಲೂ ದಾಳಿ ನಡೆದಿತ್ತು.
Next Story





