ಪೊಲೀಸ್ ಜೀಪ್‌ಗೆ ಟೆಂಪೊ ಢಿಕ್ಕಿ

ಮಂಗಳೂರು, ಎ. 9: ರಾಷ್ಟ್ರೀಯ ಹೆದ್ದಾರಿ 75ರ ಎಡ ಬದಿಯ ಕಚ್ಚಾ ರಸ್ತೆಯಲ್ಲಿ ನಿಲ್ಲಿಸಿದ್ದ ಪೊಲೀಸ್ ಜೀಪ್‌ಗೆ ಟೆಂಪೊ ಢಿಕ್ಕಿ ಹೊಡೆದ ಘಟನೆ ನಡೆದಿದೆ.
ಪಡೀಲ್‌ನಿಂದ ಮರೋಳಿ ಕಡೆಗೆ ಚಲಾಯಿಸುತ್ತಿದ್ದ ಟೆಂಪೊ ಢಿಕ್ಕಿ ಹೊಡೆದಿದೆ. ಟೆಂಪೊ ಚಾಲಕ ಅಬ್ದುಲ್ ಹಮೀದ್ ಎಂಬವರ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





