ಪ್ರಧಾನಿ ಮೋದಿಯಿಂದ ರೈತರಿಗೆ ಸುಳ್ಳು ಭರವಸೆ: ಡಾ. ವಿಜು ಕೃಷ್ಣನ್ ಆರೋಪ
ರಾಜ್ಯ ಪ್ರಾಂತ ರೈತ ಸಂಘದ ಉತ್ತರ ಕನ್ನಡ ಜಿಲ್ಲಾ 4ನೆ ಸಮ್ಮೇಳನ

ಅಂಕೋಲಾ, ಎ.9: ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಸಂದರ್ಭದಲ್ಲಿ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದೇ ನಿರ್ಲಕ್ಷಿಸಿರುವುದರಿಂದ ರೈತರಿಗೆ ಅನ್ಯಾಯವಾಗಿದೆ. ದೇಶಕ್ಕೆ ಅನ್ನ ನೀಡುವ ರೈತ ರಿಗೆ ಆತ್ಮಹತ್ಯೆಗೆ ಪ್ರೇರೆಪಣೆ ನೀತಿಯನ್ನು ಕೇಂದ್ರ ಸರಕಾರ ಅನುಸರಿಸುತ್ತಿದೆ ಎಂದು ನವ ದೆಹಲಿಯ ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯ ದರ್ಶಿ ಡಾ. ವಿಜು ಕೃಷ್ಣನ್ ಆರೋಪಿಸಿದರು. ರವಿವಾರ ಪಟ್ಟಣದ ಸತ್ಯಾ ಸಾರ್ಮಕ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಉತ್ತರ ಕನ್ನಡ ಜಿಲ್ಲಾ 4ನೆ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ಆಡಳಿತ ವಿರೋಧಿ ಅಲೆಗಳ ಮೇಲೆ ಬಿಜೆಪಿ ಅಧಿ ಕಾರ ಗಿಟ್ಟಿಸಿಕೊಂಡಿದೆ. ದೇಶದ ಬಂಡವಾಳ ಶಾಹಿಗಳಿಗೆ ರಕ್ಷಣೆ ನೀಡುವ ಮೂಲಕ ರೈತರನ್ನು ಕಡೆಗಣಿಸಿದೆ. ಯುಪಿಎ ಅವಧಿ ಯಲ್ಲಿ ಪ್ರತಿದಿನ 46 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಮೋದಿಯವರು ಅಧಿಕಾರಕ್ಕೆ ಬಂದ ನಂತರ ಪ್ರತಿದಿನ 52 ರೈತರು ದೇಶದ ವಿವಿಧ ರಾಜ್ಯಗಳಲ್ಲಿ ಸೇರಿದಂತೆ ಆತ್ಮಹತ್ಯೆ ಶರಣಾಗಿದ್ದಾರೆ.
ಬಿಜೆಪಿ ಆಳಡಳಿತದಲ್ಲಿದ್ದ ಮಹಾರಾಷ್ಟ್ರದಲ್ಲಿ ಇದುವರೆಗೆ 4,262 ರೈತರು ಸಾವಿಗೀಡಾಗಿದ್ದಾರೆ.
ಆಹಾರ ಕೊರತೆಯಿಂದ ಮಹಾರಾಷ್ಟ್ರದಲ್ಲಿ 21 ಸಾವಿರ ಹಾಗೂ ಮಧ್ಯಪ್ರದೇಶದಲ್ಲಿ 28 ಸಾವಿರ ಮಕ್ಕಳು ಬಲಿಯಾಗಿದ್ದಾರೆ ಎಂದರು. ಹೋರಾಟಗಾರ ರವೀಂದ್ರನಾಥ ನಾಯ್ಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣ ಸಕ್ರಮಕ್ಕಾಗಿ ಸಲ್ಲಿಸಲಾಗಿದ್ದ 24 ಸಾವಿರ ಅರ್ಜಿಗಳಲ್ಲಿ ಸರಕಾರ ಕೇವಲ 8,803 ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಿದೆ. ಉಳಿದ ಅರ್ಜಿಗಳು ಯಾವ ದಂಡಮಾನದಿಂದ ತಿರಸ್ಕರಿಸಲಾಗಿದೆ ಎಂಬ ಮಾಹಿತಿ ನಾವು ಪಡೆಯುಬೇಕಾದರೆ, ಹೋರಾಟದ ಮೂಲಕ ಪಡೆಯಬೇಕಾಗಿದೆ. ಇದಕ್ಕೆ ಕೆಲ ಅಧಿಕಾರಿಗಳು ಸಹ ಕಾರಣ ಕರ್ತರಾಗಿದ್ದಾರೆ. ಶಿಸ್ತಿನ ಸಂಘಟನಾ ಶಕ್ತಿಯಿಂದ ಮಾತ್ರ ಭೂಹೀನರಿಗೆ ಹಕ್ಕು ಪತ್ರ ಪಡೆಯಲು ಸಾಧ್ಯ ಎಂದರು. ಸಾಹಿತಿ ವಿಷ್ಣು ನಾಯ್ಕ, ಕಾರ್ಮಿಕ ಮುಖಂಡೆ ಯಮುನಾ ಗಾಂವಕರ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿಯ ಉಪಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ಸಿ.ಐ.ಟಿ. ಉತ್ತರ ಕನ್ನಡ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಆರ್. ಶಾನಭಾಗ್ ಹಾಗೂ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯಕ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಾರ್ಯಕ್ರಮ ಪೂರ್ವದಲ್ಲಿ ಹಳಿಯಾಳದ ರೈತ ಮುಖಂಡ ಆರ್.ಎಂ.ಮುಲ್ಲಾ ಸಂಘಟನೆಯ ಧ್ವಜಾ ರೋಹಣ ನೆರವೇರಿಸಿದರು. ರೈತ ಸಂಘಟನೆ ವಿವಿಧ ತಾಲೂಕಿನ ಪ್ರಮುಖರಾದ ವೀರಭದ್ರ ನಾಯ್ಕ ಸಿದ್ದಾಪುರ, ಚಂದ್ರಕಾಂತ ಕೊಚರೇಕರ ಹೊನ್ನಾವರ, ಶ್ರೀಧರ ಶೆಟ್ಟಿ ಭಟ್ಕಳ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ಯಾಮನಾಥ ನಾಯ್ಕ ಕಾರವಾರ ಸ್ವಾಗತಿಸಿದರು. ಗೌರೀಶ ನಾಯಕ ವಂದಿಸಿದರು.
ಸ್ವಾಮಿನಾಥನ್ ವರದಿಯನ್ನು ಜಾರಿ ಗೊಳಿಸಲು ಒತ್ತಾಯಿಸಿದರೆ ಕೇಂದ್ರ ಸರಕಾರ ಜಾಣ ಕಿವುಡುತನ ಪ್ರದರ್ಶಿಸುತ್ತಿದೆ. ಆರ್ಥಿಕ, ಕೃಷಿ, ಶಿಕ್ಷಣ ಕ್ಷೇತ್ರಗಳನ್ನು ಶ್ರೀಮಂತ ರಿಗೆಒಪ್ಪಿಸಿ ಜನ ಸಾಮಾನ್ಯರನ್ನು ಸಂಕಷ್ಟಗಳಿಗೆ ದೂಡುತ್ತಿರುವ ಕೇಂದ್ರ ಸರಕಾರ ಇದನ್ನೇ ಅಚ್ಛೇ ದಿನ್ ಎಂದು ಹೇಳುತ್ತಿದೆ. ಇದರ ವಿರುದ್ಧ ಜನಾಂದೋಲ ರೂಪಿಸುವ ಮೂಲಕ ಐಕ್ಯತೆಯಿಂದ ಎಲ್ಲರು ದೇಶದ್ಯಾಂತ ಬೃಹೃತ್ ಚಳವಳಿಗೆ ಮುಂದಾಗಬೇಕಾಗಿದೆ.
ಡಾ. ವಿಜು ಕೃಷ್ಣನ್, ಭಾರತ ಕಿಸಾನ ಸಭಾದ ಜಂಟಿ ಕಾರ್ಯದರ್ಶಿ







