ಸ್ನಾನಕ್ಕೆಂದು ಕೆರೆಗಿಳಿದ ಇಬ್ಬರು ನೀರುಪಾಲು
ಮಡಿಕೇರಿ ಏ.9: ಕ್ರಿಕೆಟ್ ಆಟದ ನಂತರ ಮೈದಾನದ ಪಕ್ಕದಲ್ಲಿದ್ದ ಕೆರೆಗೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿಗಳಾದ ಗಣೇಶ್ ಹಾಗೂ ರಾಧಾ ದಂಪತಿಯ ಪುತ್ರ ಗಗನ್(17) ಮತ್ತು ಅಂಚೆ ನೌಕರ ಮಂಜುನಾಥ್ ಹಾಗೂ ಕಾರ್ಮಾಡು ಗ್ರಾಪಂ ಸದಸ್ಯರಾದ ಸರೋಜಿನಿ ದಂಪತಿಯ ಪುತ್ರ ಮೋಹಿತ್(18) ಮೃತಪಟ್ಟ ದುರ್ದೈವಿಗಳು.
ರವಿವಾರ ಸಂಜೆ ಶಾಲಾ ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಇವರಿಬ್ಬರು ಮನೆಗೆ ಮರಳುವ ಸಂದರ್ಭ ಪಕ್ಕದಲ್ಲೇ ಇದ್ದ ಕೆರೆಗೆ ಸ್ನಾನಕ್ಕೆಂದು ಇಳಿದಿದ್ದಾರೆ ಎಂದು ಹೇಳಲಾಗಿದೆ. ಈ ಸಂದರ್ಭ ಸುಳಿಗೆ ಸಿಲುಕಿದ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ.
Next Story





