ಶ್ರೀ ಮಹಾವೀರ ಸ್ವಾಮಿಯ 2616ನ ಜಯಂತ್ಯುತ್ಸವ

ಮೂಡುಬಿದಿರೆ, ಎ.9: ಜಗತ್ತು ಶಾಂತಿಯಿಂದಿರಲು ಸಾಮರಸ್ಯದ ಬದುಕು ಅಗತ್ಯ. ಜೈನ ತೀರ್ಥಂಕರರು ಸಾಮರಸ್ಯದ ಬದುಕಿಗೆ ಜಗತ್ತಿಗೇ ಪ್ರೇರಣೆಯಾಗಿದ್ದಾರೆ. ಆದ್ದರಿಂದಲೇ ಇಂದು ಜಾಗತಿಕವಾಗಿ ವಿಶ್ವವಿದ್ಯಾಲಯಗಳಲ್ಲಿ ಧರ್ಮದ ಅಧ್ಯಯನ ನಡೆಯುತ್ತಿದೆ. ಶ್ರೀ ಮಹಾವೀರರು ಜೈನ ಧರ್ಮಕ್ಕೆ ಹೊಸ ದಿಕ್ಕು ಕೊಟ್ಟವರು ಎಂದು ಮೂಡುಬಿದಿರೆ ಶ್ರೀ ಜೈನಮಠದ ಮಠಾಧೀಶ ಸ್ವಸ್ತಿಶ್ರೀ ಟ್ಟಾರಕ ಚಾರುಕೀರ್ತಿ ಪಂಡಿತಾಚಾಯರ್ವ ಸ್ವಾಮೀಜಿ ಹೇಳಿದರು.
ದ.ಕ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಹಾಗೂ ಮೂಡುಬಿದಿರೆ ಭಾರತೀಯ ಜೈನ್ ಮಿಲನ್ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಜೈನಮಠದ ಶ್ರೀರಮಾರಾಣಿ ಶೋಧ ಸಂಸ್ಥಾನ ಸಭಾಭನದಲ್ಲಿ ನಡೆದ ಶ್ರೀ ಮಹಾವೀರ ಸ್ವಾಮಿಯ 2616ನ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಅಲಂಗಾರು ಹೋಲಿ ರೋಸರಿ ಚರ್ಚ್‌ನ ಧರ್ಮಗುರು ರೆ.ಫಾ.ಬಾಸಿಲ್‌ವಾಸ್, ಧರ್ಮಗುರು ವೌಲಾನಾ ಮುಹಮ್ಮದ್ ಶರೀಫ್ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜಾನಪದ ವಿದ್ವಾಂಸ, ಎನ್ನೆಸ್ಸೆಸ್ ರಾಜ್ಯ ಸಂಯೋಜಕ ಡಾ.ಗಣನಾಥ ಎಕ್ಕಾರು ಮುಖ್ಯ ಅತಿಥಿಯಾಗಿದ್ದರು. ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ವಲಯ ಅಧ್ಯಕ್ಷ ಎಚ್.ಧನಕೀರ್ತಿ ಬಲಿಪ ಅಧ್ಯಕ್ಷತೆ ವಹಿಸಿದ್ದರು. ಜೈನ್ ಮಿಲನ್ ವಲಯ ನಿರ್ದೇಶಕ ಜಯರಾಜ್ ಕಂಬಳಿ, ಬಸದಿಗಳ ಮೊಕ್ತೇಸರ ದಿನೇಶ್ ಆನಡ್ಕ, ಉಪನ್ಯಾಸಕ ನಮಿರಾಜ್ ಉಪಸ್ಥಿತರಿದ್ದರು.
ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.







