ಎ.15: ರಾಮ ದೇವಾಡಿಗರಿಗೆ ಗುರುವಂದನೆ
ಉಡುಪಿ, ಎ.9: ಬಡಗುತಿಟ್ಟಿನ ಹಾಸ್ಯಗಾರ ಕಮಲಶಿಲೆ ರವೀಂದ್ರ ದೇವಾಡಿಗ ಅವರ 25ನೆ ವರ್ಷದ ಯಕ್ಷಗಾನ ತಿರುಗಾಟದ ಅಂಗವಾಗಿ ಎ.15ರಂದು ಕುಂದಾಪುರದ ಬಸ್ರೂರು ಮೂರ್ಕೈ ಬೈಲು ಚಿಕ್ಕು ದೇವಸ್ಥಾನ ಬಳಿ ನಡೆಯುವ ಪೆರ್ಡೂರು ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತನಗೆ ಹೆಜ್ಜೆ ಕಲಿಸಿದ ಗುರು ರಾಮ ದೇವಾಡಿಗ ಕಮಲಶಿಲೆ ಕೊಚ್ಚಾಡಿ ಅವರಿಗೆ ರವೀಂದ್ರ ದೇವಾಡಿಗ ಗುರುವಂದನೆ ಸಲ್ಲಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





