ಉಪಯೋಗಿಸಿದ ನಂತರ ಟೀ ಬ್ಯಾಗುಗಳನ್ನು ಎಸೆಯಬೇಡಿ: ಇಲ್ಲಿವೆ 5 ಕಾರಣಗಳು
ನವದೆಹಲಿ, ಎ.10: ಸಾಮಾನ್ಯವಾಗಿ ನಾವೆಲ್ಲರೂ ದಿನಕ್ಕೆ ಕನಿಷ್ಠ ಎರಡು ಕಪ್ ಚಹಾ ಸೇವಿಸುತ್ತೇವೆ. ನಮ್ಮಲ್ಲಿ ಹೆಚ್ಚಿನವರು ಸುಲಭದ ಮಾರ್ಗವನ್ನನುಸರಿಸಿ ನಮಗಿಷ್ಟವಾದ ಟೀ ಬ್ಯಾಗನ್ನು ಬಿಸಿ ಬಿಸಿ ನೀರಿರುವ ಕಪ್ ಒಳಗೆ ಮುಳುಗಿಸಿ, ಆರಾಮವಾಗಿ ಕುಳಿತು ಬಿಡುತ್ತೇವೆ. ಟೀ ಬ್ಯಾಗ್ ಉಪಯೋಗವಾದ ನಂತರ ಮತ್ತೊಮ್ಮೆ ಯೋಚಿಸದೆ ಅದನ್ನು ಕಸದ ಬುಟ್ಟಿಗೆ ಎಸೆದು ಬಿಡುತ್ತೇವೆ. ಅದನ್ನು ಬಹಳಷ್ಟು ಪ್ರಯೋಜನಕಾರಿಯಾಗಿಸುವ ವಿಧಾನವೊಂದಿದೆ ಎಂಬ ಅರಿವೂ ನಮಗಿರುವುದಿಲ್ಲ.
ಮೊತ್ತ ಮೊದಲನೆಯದಾಗಿ ಈ ಉಪಯೋಗಿಸಿದ ಟೀ ಬ್ಯಾಗುಗಳನ್ನು ಸುಸ್ತಾಗಿರುವ ಕಣ್ಣುಗಳ ಮೇಲಿಟ್ಟರೆ ಆರಾಮದಾಯಕ. ಕಣ್ಣಿನ ಕೆಳಗಿರುವ ಡಾರ್ಕ್ ಸರ್ಕಲ್ ಗಳನ್ನೂ ಅದು ಕಡಿಮೆಗೊಳಿಸುತ್ತದೆ. ಆದರೆ ಟೀ ಬ್ಯಾಗ್ ಬೆಚ್ಚಗಿರದೇ ಇರಲಿ. ನಿಮ್ಮ ಚಹಾ ಸೇವನೆಯಾದ ನಂತರ ಟೀ ಬ್ಯಾಗುಗಳನ್ನು ಪ್ಲೇಟ್ ಅಥವಾ ಕಪ್ ಒಳಗೆ ಹಾಕಿ ಫ್ರಿಜ್ ನಲ್ಲಿ ಸುಮಾರು 20 ನಿಮಿಷಗಳ ಕಾಲ ಇಡಿ. ಅದು ತಣ್ಣಗಾದ ನಂತರ ತೆಗೆದು ಕಣ್ಣು ಮುಚ್ಚಿ ಅದರ ಮೇಲಿಟ್ಟು ಬಿಡಿ ಹಾಗೂ ಹಾಗೆಯೇ ಸುಮಾರು 20 ನಿಮಿಷ ಇರಿ. ಚಹಾದಲ್ಲಿರುವ ಕೆಫೀನ್ ರಕ್ತನಾಳವನ್ನು ಸಂಕುಚಿತಗೊಳಿಸಿ ಡಾರ್ಕ್ ಸರ್ಕಲ್ ಗಳು ಹಾಗೂ ಕಣ್ಣಿನ ಸುತ್ತಲಿನ ಭಾಗ ದಪ್ಪಗಾಗುವುದನ್ನು ತಡೆಯುತ್ತದೆ.
ಇವಿಷ್ಟು ಆಯಿತು. ಟೀ ಬ್ಯಾಗುಗಳ ಇತರ ಉಪಯೋಗಗಳನ್ನು ಬಲ್ಲಿರಾ ? ಇಲ್ಲಿ ಓದಿ.
- 1. ಚಹಾ ಎಲೆಗಳು ಮಣ್ಣಿಗೆ ಪೋಷಕಾಂಶಗಳನ್ನು ನೀಡುತ್ತವೆ: ಟೀ ಬ್ಯಾಗುಗಳನ್ನು ಎಸೆಯುವ ಬದಲು ಅವುಗಳನ್ನು ಮಡಿಕೆಯೊಂದರಲ್ಲಿಟ್ಟು ಮಣ್ಣು ಹಾಕಿ ಬಿಡಿ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.
- 2. ಚಹಾ ಎಲೆಗಳು ಹಾಗೂ ಕಾಫಿಯ ಬೀಜದ ಹುಡಿಗಳು ಬೆಕ್ಕುಗಳನ್ನು ದೂರವಿಡುತ್ತವೆ: ಬೆಕ್ಕುಗಳಿಗೆ ಚಹಾ ಎಲೆಗಳು ಹಾಗೂ ಕಾಫಿ ಹುಡಿಯ ಪರಿಮಳ ಇಷ್ಟವಾಗದು. ನಿಮ್ಮ ಬೆಕ್ಕು ನಿಮಗೆ ಇಷ್ಟವಾಗದ ಕಡೆ ಮಲಮೂತ್ರ ಮಾಡುತ್ತದೆಯೆಂದು ನಿಮಗೆ ಕಂಡರೆ ಅಲ್ಲಿ ಉಪಯೋಗಿಸಿದ ಚಹಾ ಹುಡಿಯನ್ನು ಹರಡಿ ನಂತರ ಅದರ ಪರಿಣಾಮ ನೋಡಿ.
- 3. ತರಕಾರಿ ತ್ಯಾಜ್ಯಗಳು ಬೇಗನೇ ಮಣ್ಣಾಗಿ ಹೋಗುವಲ್ಲಿ ಚಹಾ ಸಹಾಯ ಮಾಡುತ್ತದೆ: ನೀವು ನಿಮ್ಮ ಮನೆಯ ತರಕಾರಿ ತ್ಯಾಜ್ಯಗಳನ್ನು ನಿಮ್ಮ ಅಂಗಳದ ಗಿಡಗಳಿಗೆ ಗೊಬ್ಬರವಾಗಿಸುತ್ತಿದ್ದರೆ ಅದಕ್ಕೆ ಉಪಯೋಗಿಸಿದ ಟೀ ಬ್ಯಾಗನ್ನೂ ಅದಕ್ಕೆ ಹಾಕಿ ಬಿಡಿ. ಅವು ಬೇಗನೇ ಮಣ್ಣಲ್ಲಿ ಕರಗಿ ಹೋಗುತ್ತದೆ.
- 4. ಹುಳಗಳು ಚಹಾ ಎಲೆಗಳನ್ನು ತಿನ್ನುತ್ತವೆ: ಹುಳಗಳಿಗೆ ಚಹಾ ಎಲೆಗಳನ್ನು ತಿನ್ನುವುದೆಂದರೆ ಇಷ್ಟ. ಹೀಗೆ ಅವುಗಳು ಈ ಆಹಾರವನ್ನು ಜೀರ್ಣಿಸಿದಾಗ ಅವುಗಳು ಹೊರಸೂಸುವ ತ್ಯಾಜ್ಯ ಮಣ್ಣಿಗೆ ಅಗತ್ಯ ಪೋಷಕಾಂಶ ನೀಡುತ್ತದೆ.
- 5. ಕಳೆ ಗಿಡಗಳಿಗೆ ಟೀ ಬ್ಯಾಗುಗಳೆಂದರೆ ಆಗದು: ಟೀ ಬ್ಯಾಗುಗಳನ್ನು ನಿಮ್ಮ ಅಂಗಳದಲ್ಲಿ ಹೂತು ಬಿಟ್ಟರೆ. ಕಳೆ ಗಿಡಗಳು ಬೆಳೆಯುವುದನ್ನು ಅದು ತಡೆಯುತ್ತದೆ.