ಈ ಮಗುವಿಗೆ ದೇಹದ ಹೊರಭಾಗದಲ್ಲಿ ಹೃದಯ!

ಚತ್ತರ್‌ಪುರ್(ಮಧ್ಯಪ್ರದೇಶ), ಎ.10: ಶರೀರದ ಹೊರಭಾಗದಲ್ಲಿ ಹೃದಯವಿದ್ದುಹುಟ್ಟಿದ ಶಿಶುವನ್ನು ತಜ್ಞ ಚಿಕಿತ್ಸೆಗಾಗಿ ಹೊಸದಿಲ್ಲಿಯ ಆಲ್ ಇಂಡಿಯ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ಕರೆತರಲಾಗಿದೆ.ಮಧ್ಯಪ್ರದೇಶದ ಖಜುರಾಹೊ ನಗರದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಈಮಗು ಜನಿಸಿದೆ.
ಹತ್ತು ಲಕ್ಷ ಮಕ್ಕಳಲ್ಲಿ ಎಂಟು ಮಕ್ಕಳಿಗೆ ಇಂತಹ ಸ್ಥಿತಿ ಕಂಡು ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇಂತಹ ಶಿಶುಗಳ ಜನನಸ್ಥಿತಿಯನ್ನು ಎಕ್ಟೊಪಿಯ ಕಾರ್ಡಿಸ್ ಎಂದು ಕರೆಯಲಾಗುತ್ತಿದೆ ಎಂದು ಚಾತ್ತರ್‌ಪುರ್ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಆರ್.ಎಸ್. ತ್ರಿಪಾಠಿ ಹೇಳುತ್ತಾರೆ. ಖಜರಾಹೊ ಶಿಲ್ಪಗಳ ರಕ್ಷಣೆಗೆ ನೇಮಕವಾದ ಗಾರ್ಡ್ ಅರವಿಂದ್ ಪೇಟ್ಟಲ್ ದಂಪತಿಗೆ ಈಮಗು ಜನಿಸಿದೆ.
ಮಗುವಿನ ಚಿಕಿತ್ಸೆಗೆ ಮುಖ್ಯಮಂತ್ರಿಯಮಕ್ಕಳ ಮತ್ತು ಹೃದ್ರೋಗ ಯೋಜನೆಯಿಂದ ಹಣ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ರಮೇಶ್ ಭಂಡಾರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಹತ್ತುವರ್ಷಗಳಲ್ಲಿ ಈರೀತಿ ಜನಸಿದ ಎರಡನೆ ಮಗು ಎಂದು ಅವರು ಹೇಳಿದ್ದಾರೆ.
Next Story