ನನ್ನಮಕ್ಕಳು ಹಸಿದು ಸಾಯಬಾರದು ಎಂದ ಲಾಲು ಪ್ರಸಾದ್ ಯಾದವ್
ಲಾಲೂ ವಿರುದ್ಧ 500 ಕೋಟಿ ಭ್ರಷ್ಟಾಚಾರ ಆರೋಪ

ಪಾಟ್ನಾ,ಎ.10: ಆರ್‌ಜೆಡಿನಾಯಕ ಲಾಲುಪ್ರಸಾದ್ ಯಾದವ್‌ರ ವಿರುದ್ಧ 500 ಕೋಟಿ ರೂಪಾಯಿ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಮಕ್ಕಳ ಹೆಸರಿನಲ್ಲಿ ಖರೀದಿಸಿದ ಜಮೀನಿನಲ್ಲಿ ಬೃಹತ್ ಹೂಡಿಕೆ ಮಾಡಿ ಮಾಲ್ ಒಂದನ್ನು ಕಟ್ಟಿಸಲು ಲಾಲೂ ನಿರ್ಧರಿಸಿದ್ದಾರೆ. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು" ನನ್ನ ಮಕ್ಕಳು ಹಸಿದು ಸಾಯುವಂತಾಗಬಾರದು. ಆದ್ದರಿಂದ ಬಿಸಿನೆಸ್ ಮಾಡುವುದರಲ್ಲಿತಪ್ಪಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಪಾಟ್ನಾದಲ್ಲಿ 60ಕೋಟಿ ರೂಪಾಯಿಮೌಲ್ಯದ ಎರಡು ಎಕರೆ ಜಮೀನು ಮಕ್ಕಳಾದ ತೇಜ್ ಪ್ರತಾಪ್, ತೇಜಸ್ವಿಯಾದವ್ ಹಾಗೂ ಪತ್ನಿ ರಾಬರಿ ದೇವಿಯ ಹೆಸರಿನಲ್ಲಿ ಲಾಲುಪ್ರಸಾದ್ ಯಾದವ್ ಖರೀದಿಸಿದ್ದು, ಇದರಲ್ಲಿ ಬಿಹಾರದಲ್ಲೇ ಅತೀದೊಡ್ಡ ಶಾಪಿಂಗ್ ಮಾಲ್ ಕಟ್ಟಿಸುವ ಸಿದ್ಧತೆಯಲ್ಲಿದ್ದಾರೆ. 500 ಕೋಟಿರೂಪಾಯಿ ಯೋಜನೆಯಲ್ಲಿ ಅರ್ಧದಷ್ಟು ಶೇರುಗಳು ಮಾತ್ರ ತಮ್ಮದು ಉಳಿದ ಅರ್ಧ ಪಾಲು ಪಕ್ಷದ ವಿಧಾನಸಭಾ ಸದಸ್ಯರದ್ದಾಗಿದೆ ಎಂದು ಲಾಲುಪ್ರಸಾದ್ ಯಾದವ್ ಸ್ಪಷ್ಟಪಡಿಸಿದ್ದಾರೆ.
ಆದರೆ,ಬಿಹಾರದ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ , " ಲಾಲು ಪ್ರಸಾದ್ ಯಾದವ್ 2008ರಲ್ಲಿ ರೈಲ್ವೆ ಸಚಿವರಾಗಿದ್ದಾಗ ತನ್ನ ಸ್ಥಾನಮಾನ ದುರುಪಯೋಗಿಸಿ ಪಾಟ್ನಾದಲ್ಲಿ ಕಬಳಿಕೆ ಮಾಡಿದ ಜಮೀನು ಇದೆಂದು ಆರೋಪಿಸಿದ್ದಾರೆ.