ಕತರ್: ಖಾಸಗಿ ವಿವರಗಳ ಸೋರಿಕೆ - ಗಂಭೀರ ಅಪರಾಧ

ದೋಹ, ಎ. 10: ವ್ಯಕ್ತಿಗಳ ವಿವರಗಳನ್ನು ಯಾವುದೇ ರೀತಿಯಲ್ಲಿ ಸೋರಿಕೆ ಮಾಡಿಕೊಡುವುದು ಗಂಭೀರ ಅಪರಾಧ ಕೃತ್ಯವೆಂದು ದೇಶದ ಪ್ರಮುಖ ನ್ಯಾಯಾವಾದಿಗಳು ವಿವರಿಸಿದ್ದಾರೆ. ಭಾರೀ ಮೊತ್ತದ ದಂಡ ಮತ್ತು ಜೈಲು ಶಿಕ್ಷೆ ಲಭಿಸಬಹುದಾದ ಅಪರಾಧ ಇದು. ವ್ಯಕ್ತಿ ತನ್ನ ವೈಯಕ್ತಿಕ ವಿವರಗಳನ್ನು ನೀಡುವುದು ಯಾವುದಾದರೂ ಸೇವೆಗಾಗಿರುತ್ತದೆ. ಅದನ್ನು ಆತನಿಗೆ ಗೊತ್ತಿಲ್ಲದಂತೆ ಯಾವುದಾದರೂ ವ್ಯವಸ್ಥೆಗಳಿಗೆ, ಸಂಸ್ಥೆಗಳಿಗೆ ನೀಡುವುದು ಗಂಭೀರ ಅಪರಾಧ ಕೃತ್ಯವಾಗಿ ಕತರ್‌ನಲ್ಲಿ ಪರಿಗಣಿಸಲಾಗುತ್ತಿದೆ ಎಂದು ನ್ಯಾಯವಾದಿ ಅಲಿ ಅಲ್‌ದಾಹಿರಿ ಹೇಳಿದರು.
ಖಾತೆ ಸಂಖ್ಯೆಗಳು, ಗುರುತು ಚೀಟಿನ ಸಂಖ್ಯೆ , ಬ್ಯಾಂಕ್ ವಿವರಗಳು, ದೂರವಾಣಿ ಸಂಖ್ಯೆಗಳು,ಇತರ ವ್ಯಕ್ತಿಗಳಿಗೆ ಸಂಬಂದಿಸಿದ ದಾಖಲೆಗಳು ಯಾವ ಕಾರಣಕ್ಕೂ ಅದರ ನೈಜ ಮಾಲಕನಿಗೆ ಗೊತ್ತಾಗದೆ ಇತರರಿಗೆ ನೀಡುವ ಹಕ್ಕು ಯಾರಿಗೂ ಇಲ್ಲ. ಹೀಗೆ ಮಾಡಿದರೆ ಒಂದು ಮಿಲಿಯನ್ ರಿಯಾಲ್‌ವರೆಗೆ ದಂಡ ವಿಧಿಸಲು ಅವಕಾಶ ವಿದೆ ಎಂದು ಅವರು ತಿಳಿಸಿದರು.
ಮಾಹಿತಿ ಸಂಗ್ರಹಿಸಲು ಅಗತ್ಯವಾದ ಪೂರ್ವಸಿದ್ಧತೆ ಮಾಡದೆ ನಿರ್ಲಕ್ಷವೆಸಗಿದರೆ ದಂಡ ವಿಧಿಸಬಹುದಾಗಿದೆ ಎಂದು ಇನ್ನೋರ್ವ ವಕೀಲ ಮುನ ಅಲ್‌ಮುತವ್ವವಃ ಹೇಳಿದರು. ಯಾವುದೆ ವ್ಯಕ್ತಿ ತನ್ನ ವಿವರಗಳ ಸೋರಿಕೆ ನಡೆಸಲಾಗಿದೆ ಎಂದು ಗೊತ್ತಾದರೆ ನ್ಯಾಯಾಲಯವನ್ನು ಸಂಪರ್ಕಿಸಿ ದೂರು ನೀಡುವ ಹಕ್ಕು ಇದೆ ಎಂದು ಅವರು ವಿವರಿಸಿದರು.







